ಮಡಿಕೇರಿ, ಜ. 27: ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ 6 ಸದಸ್ಯರ ನೇಮಕಾತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಕ್ಕಳ ಹಕ್ಕುಗಳ ರಕ್ಷಣೆಯ ಆಯೋಗಕ್ಕೆ ಆರು ಸದಸ್ಯರನ್ನು (ಇಬ್ಬರು ಮಹಿಳಾ ಸದಸ್ಯರನ್ನು ಒಳಗೊಂಡಂತೆ) ರಾಜ್ಯ ಸರ್ಕಾರ ನೇಮಿಸಬೇಕಿದೆ. ಸದಸ್ಯರ ಅವಧಿಯು 3 ವರ್ಷದ್ದಾಗಿದ್ದು, ಅರ್ಜಿ ಸಲ್ಲಿಸುವವರ ವಯೋಮಿತಿ 57 ವರ್ಷದೊಳಗಿರಬೇಕು.
ಆಸಕ್ತರು ನಿಗದಿತ ನಮೂನೆಯನ್ನು ಭರ್ತಿ ಮಾಡಿದ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಆದಷ್ಟು ಶೀಘ್ರ ಇಲಾಖೆ ನಿರ್ದೇಶಕರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್ಸೈಟ್ hಣಣಠಿ://ತಿತಿತಿ.ಜತಿಛಿಜ.ಞಚಿಡಿ.ಟಿiಛಿ.iಟಿ ನ್ನು ಸಂಪರ್ಕಿಸಬಹುದು.