ಮಡಿಕೇರಿ, ಜ. 27: 2019ರ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಜಧಾನಿ ನವದೆಹಲಿಯಲ್ಲಿ ಜರುಗಿದ ಎನ್ಸಿಸಿ ವಿಭಾಗದ ಪಥ ಸಂಚಲನದಲ್ಲಿ ಕೊಡಗು ಜಿಲ್ಲೆಯನ್ನೂ ಒಳಗೊಂಡಿರುವ ಕರ್ನಾಟಕ-ಗೋವಾ ಡೈರೆಕ್ಟರೇಟ್ಗೆ ಈ ಬಾರಿ ಪ್ರಥಮ ಸ್ಥಾನ ಲಭ್ಯವಾಗಿದೆ.2004ರಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಕರ್ನಾಟಕ ಗೋವಾ ಡೈರೆಕ್ಟರೇಟ್ಗೆ ನಂತರದ ವರ್ಷಗಳಲ್ಲಿ ಪ್ರಥಮ ಸ್ಥಾನ ದೊರೆತಿರಲಿಲ್ಲ. ಇದೀಗ 15 ವರ್ಷಗಳ ಅಂತರದಲ್ಲಿ ಈ ಸಾಧನೆ ಮಾಡಲಾಗಿದೆ. ಈ ಡೈರೆಕ್ಟರೇಟ್ನ ಮೂಲಕ 106 ಎನ್ಸಿಸಿ ಕೆಡೆಟ್ಗಳು ಈ ಬಾರಿಯ ಪಥ ಸಂಚಲನಕ್ಕೆ ತೆರಳಿದ್ದರು. ಎಲ್ಲಾ ವಿಭಾಗಗಳಲ್ಲಿನ ಸಾಧನೆ-ಪ್ರತಿಭೆಯನ್ನು ಅವಲೋಕಿಸಿ ಈ ಆಯ್ಕೆ ನಡೆಯುತ್ತದೆ. ಎನ್ಸಿಸಿಯಲ್ಲಿ ದೇಶದ ಒಟ್ಟು 17 ಡೈರೆಕ್ಟರೇಟ್ ಭಾಗವಹಿಸುತ್ತಿದ್ದು, ಈ ಪೈಕಿ ಕರ್ನಾಟಕ-ಗೋವಾಕ್ಕೆ ಪ್ರಥಮ ಸ್ಥಾನ ಲಭಿಸಿರುವದು ಗಮನಾರ್ಹವಾಗಿದೆ.
ಸಾಧನೆ-ಪ್ರತಿಭೆಯನ್ನು ಅವಲೋಕಿಸಿ ಈ ಆಯ್ಕೆ ನಡೆಯುತ್ತದೆ. ಎನ್ಸಿಸಿಯಲ್ಲಿ ದೇಶದ ಒಟ್ಟು 17 ಡೈರೆಕ್ಟರೇಟ್ ಭಾಗವಹಿಸುತ್ತಿದ್ದು, ಈ ಪೈಕಿ ಕರ್ನಾಟಕ-ಗೋವಾಕ್ಕೆ ಪ್ರಥಮ ಸ್ಥಾನ ಲಭಿಸಿರುವದು ಗಮನಾರ್ಹವಾಗಿದೆ.
(ಮೊದಲ ಪುಟದಿಂದ) ಗಾರ್ಡ್ ಆಫ್ ತಂಡಕ್ಕೂ ಆಯ್ಕೆಗೊಂಡಿದ್ದಾಳೆ. ಎನ್ಸಿಸಿಯ ಈ ಬಾರಿಯ ತಂಡವನ್ನು ನವದೆಹಲಿಗೆ ಕರೆದೊಯ್ದಿರುವ ಉಸ್ತುವಾರಿ ಅಧಿಕಾರಿ (ಕಂಟಿಂಜೆಂಟ್ ಕಮಾಂಡರ್) ಕೂಡ ಕೊಡಗಿನವರಾದ ಕರ್ನಲ್ ಚೀಯಕಪೂವಂಡ ಬೋಪಣ್ಣ ಅವರಾಗಿದ್ದು, ಈ ಸಾಧನೆಯಲ್ಲಿ ಕೊಡಗಿನವರ ಕೊಡುಗೆಯೂ ಹೆಚ್ಚಿರುವದು ವಿಶೇಷವಾಗಿದೆ.
ಎನ್ಸಿಸಿ ಕೆಡೆಟ್ಗಳಾದ ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜಿನ ನಾಪಂಡ ಪೊನ್ನಣ್ಣ, ತೇಜಸ್ ಬಿ.ಎಸ್., ಕೊಡಗು ವಿದ್ಯಾಲಯದ ದೇಬಯಾನ, ಭೌಮಿಕ, ಬೆಂಗಳೂರಿನಲ್ಲಿರುವ ಕೊಡಗಿನ ಕೆಡೆಟ್ಗಳಾದ ದಿಯಾ ಹಾಗೂ ಮೂಡೆರ ನೀಲಾ ತೆರಳಿದ್ದರು.