ಕೂಡಿಗೆ, ಜ. 27: ಬಾಣಾವರ ಉಪವಲಯ ವ್ಯಾಪ್ತಿಯ ಭುವಂಗಾಲ ಗ್ರಾಮದಲ್ಲಿ ಗ್ರಾಮ ಅರಣ್ಯ ಸಮಿತಿ ವತಿ ಯಿಂದ ಬೆಂಕಿಯಿಂದ ಅರಣ್ಯ ಸಂರಕ್ಷಣೆ ಕಾರ್ಯಕ್ರಮ ನಡೆಯಿತು. ಸೋಮವಾರ ಪೇಟೆ ವಲಯ ಅರಣ್ಯ ಅಧಿಕಾರಿ ಲಕ್ಷ್ಮಿಕಾಂತ್ ಮಾತನಾಡಿ, ಮುಂದಿನ ತಲೆಮಾರಿಗೆ ಅರಣ್ಯ ಉಳಿಯುವ ಮತ್ತು ಅದರ ಮಹತ್ವದ ಬಗ್ಗೆ ತಿಳಿಸಿದರು. ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಮಾಚಯ್ಯ ಮಾತನಾಡಿ, ಅರಣ್ಯದ ವಿಷಯ ಕುರಿತು ಇಂದಿನ ಪೀಳಿಗೆಗೆ ತಿಳಿಸಬೇಕಾಗಿದೆ ಎಂದರು. ಬಾಣಾವರ ಉಪ ಅರಣ್ಯ ಅಧಿಕಾರಿ ಮಹಾದೇವ ನಾಯಕ ಹಾಗೂ ಸಿಬ್ಬಂದಿ ವರ್ಗ, ಗ್ರಾಮಸ್ಥರು ಹಾಜರಿದ್ದರು.