ಗೋಣಿಕೊಪ್ಪಲು.ಜ.26:ಗಣರಾಜೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ತಿರಂಗ ಯಾತ್ರೆ ವಾಹನ ಜಾಥಾಕ್ಕೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದ ಮುಂಭಾಗ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಿದರು. ಪೊನ್ನಂಪೇಟೆಯಿಂದ ಹೊರಟ ವಾಹನ ಜಾಥಾವು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗುತ್ತ ಗೋಣಿಕೊಪ್ಪಲುವಿನ ಪಟ್ಟಣ ಪ್ರವೇಶಿಸಿ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಮುಕ್ತಾಯವಾಯಿತು.

ತಿರಂಗ ಯಾತ್ರೆಯ ಜಿಲ್ಲಾಧ್ಯಕ್ಷ ಕುಲ್‍ದೀಪ್ ಮುಂದಾಳತ್ವದಲ್ಲಿ ಜಾಥಾ ಆಯೋಜನೆಗೊಂಡಿದ್ದು ಅಪಾರ ಸಂಖ್ಯೆಯ ತಿರಂಗ ಯಾತ್ರೆಯ ಪದಾಧಿಕಾರಿಗಳು, ಸಂಘ ಪರಿವಾರದ ಪ್ರಮುಖರು, ಬಿಜೆಪಿ ಮುಖಂಡರು ತಮ್ಮ ವಾಹನದಲ್ಲಿ ರಾಷ್ಟ್ರ ಧ್ವಜವನ್ನು ಅಳವಡಿಸಿಕೊಂಡು ಮೆರವಣಿಗೆಯಲ್ಲಿ ಸಾಗಿ ಬಂದರು.

ಈ ಸಂದರ್ಭ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಪಟ್ರಪಂಡ ರಘುನಾಣಯ್ಯ, ತಾಲೂಕು ಯುವ ಮೋರ್ಚಾ ಅಜಿತ್ ಕರುಂಬಯ್ಯ, ಪದಾಧಿಕಾರಿಗಳ ರಾಜೇಶ್, ನವನೀತ್, ಮಾಚೆಟ್ಟಿರ ಸಚಿನ್, ಭರತ್, ಕುಮಾರ್, ಮುತ್ತುರಾಜ್, ಮುರುಗೇಶ್, ಮಂಜುನಾಥ್, ಮಂಜು, ಸಚಿನ್, ಲೋಕೇಶ್, ಮಂಜುರೈ ಪೊನ್ನಂಪೇಟೆ ನಗರ ಅಧ್ಯಕ್ಷ ಮುದ್ದಿಯಡ ಮಂಜು ಪ್ರಧಾನ ಕಾರ್ಯದರ್ಶಿ ಅಮ್ಮತ್ತೀರ ಸುರೇಶ್, ಗೋಣಿಕೊಪ್ಪ ಬಿಜೆಪಿ ನಗರ ಅಧ್ಯಕ್ಷ ಮಲ್ಚೀರ ಗಾಂಧಿ ದೇವಯ್ಯ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಿ.ಕೆ.ಬೋಪಣ್ಣ, ಮೂಕೊಂಡ ಶಶಿ ಸುಬ್ರಮಣಿ,ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ನೆಲ್ಲೀರ ಚಲನ್,ಕ್ಷೇತ್ರ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಬಿಜೆಪಿ ಮುಖಂಡರಾದ ಚೋಡುಮಾಡ ಶ್ಯಾಂ ಪೂಣಚ್ಚ, ಆದೇಂಗಡ ವಿನು ಚಂಗಪ್ಪ,ಕೊಟ್ಟಂಗಡ ಪ್ರಕಾಶ್,ಮಲ್ಲಂಡ ಮಧು, ಆಳಮೇಯಂಗಡ ವಿವೇಕ್, ಪ್ರಧಾನ ಕಾರ್ಯದರ್ಶಿ ಲಾಲಾ ಭೀಮಯ್ಯ, ತೋರೆರ ವಿನು, ಮತ್ರಂಡ ಪ್ರವೀಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಕೀಂ, ಬೊಟ್ಟಂಗಡ ದಶಮಿ, ಚೇಂದಂಡ ಸುಮಿ ಸುಬ್ಬಯ್ಯ, ಗುಮ್ಮಟ್ಟಿರ ಕಿಲನ್ ಗಣಪತಿ, ಗುಮ್ಮಟ್ಟೀರ ದರ್ಶನ್, ಪಂದ್ಯಂಡ ಹರೀಶ್, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ಗೋಣಿಕೊಪ್ಪ ವೃತ್ತ ನಿರೀಕ್ಷಕ ದಿವಾಕರ್ ನೇತೃತ್ವದಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ಮಹೇಶ್, ಗೋಣಿಕೊಪ್ಪ ಠಾಣಾಧಿಕಾರಿ ಶ್ರೀಧರ್, ವೀರಾಜಪೇಟೆ ಠಾಣಾಧಿಕಾರಿ ಸುರೇಶ್ ಬೋಪಣ್ಣ ಹಾಗೂ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಪಟ್ಟಣದ ಎರಡು ಬದಿಯಲ್ಲಿಯೂ ಸಾರ್ವಜನಿಕರು ತಿರಂಗ ಯಾತ್ರೆಯನ್ನು ವೀಕ್ಷಿಸಿದರು.