ಮಡಿಕೇರಿ, ಜ. 25: ಸೇನಾ ಜಿಲ್ಲೆಯೆಂಬ ಹೆಗ್ಗಳಿಕೆ ಹೊಂದಿರುವ ಕೊಡಗು ಜಿಲ್ಲೆಗೆ ಈ ಬಾರಿಯ ಗಣರಾಜ್ಯೋತ್ಸವದ ದಿನಕ್ಕೆ ಸಂತಸದಾಯಕವಾದ ಕೊಡುಗೆ ದೊರೆತಿದೆ. ಭಾರತೀಯ ಸೇನೆಯ ಮೂಲಕ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇನಾಧಿಕಾರಿಗಳಿಗೆ ನೀಡುವ ಉನ್ನತ ಬಿರುದಿಗೆ ಕೊಡಗು ಜಿಲ್ಲೆಯವರಾದ ಸೇನೆಯಲ್ಲಿ ಕರ್ತವ್ಯದಲ್ಲಿರುವ ಐವರು ಅಧಿಕಾರಿಗಳು ಆಯ್ಕೆಯಾಗಿರುವದು ಈ ಬಾರಿಯ ವಿಶೇಷವಾಗಿದೆ.ಲೆಫ್ಟಿನೆಂಟ್ ಜನರಲ್ ಆಗಿರುವ ಪಟ್ಟಚೆರವಂಡ ಸಿ. ತಿಮ್ಮಯ್ಯ ಅವರಿಗೆ ಪರಮ ವಿಶಿಷ್ಟ ಸೇವಾ ಮೆಡಲ್, ಮೇಜರ್ ಜನರಲ್ ಕೋದಂಡ ಪಿ. ಕಾರ್ಯಪ್ಪ ಅವರಿಗೆ ಅತಿ ವಿಶಿಷ್ಟ ಸೇವಾಮೆಡಲ್ ಮೇಜರ್ ಜನರಲ್ ಚೆನ್ನೀರ ಬಿ. ಪೊನ್ನಪ್ಪ ಅವರಿಗೆ ಅತಿ ವಿಶಿಷ್ಟ ಸೇವಾ ಮೆಡಲ್ ಹಾಗೂ ಕರ್ನಲ್ ಬಿ.ಡಿ. ಚಂಗಪ್ಪ ಅವರಿಗೆ ಮತ್ತು ಕರ್ನಲ್ ಪಿ.ಎಸ್. ಭೀಮಯ್ಯ ಅವರಿಗೆ ಸೇನಾ ಮೆಡಲ್ ಲಭ್ಯವಾಗಿದೆ. ಈ ಬಗ್ಗೆ ಮೇಜರ್ ನಂದಾ ನಂಜಪ್ಪ ಅವರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.