ಮಡಿಕೇರಿ, ಜ. 26: ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ ತಾ. 31ರಿಂದ ನಡೆಯಲಿರುವ ಎ ಡಿವಿಜನ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಹಾಕಿ ಕರ್ನಾಟಕ ತಂಡವನ್ನು ಒಲಿಂಪಿಯನ್ ಕೊಡಗಿನ ಎಸ್.ವಿ. ಸುನಿಲ್ ಮುನ್ನಡೆಸಲಿದ್ದಾರೆ. ತಂಡದ ಇತರ ಆಟಗಾರರಾಗಿ ಎಸ್.ಕೆ. ಉತ್ತಪ್ಪ (ಉಪನಾಯಕ), ರಘುನಾಥ್ ವಿ.ಆರ್., ವಿಕ್ರಮ್ ಕಾಂತ್, ಶಮಂತ್ ಸಿ.ಎಸ್., ತಿಮ್ಮಣ್ಣ ಪಿ.ಎಲ್., ಎಸ್.ಕೆ. ಅಪ್ಪಚ್ಚು, ಭರತ್ ಕೆ.ಆರ್., ಪುನಿತ್ ಆರ್., ಕುಮಾರ್ ಎನ್., ಮಣಿಕಾಂತ್ ಬೇಜವಾಡ್, ಲಿಖಿತ್ ಬಿ.ಎಂ., ರಾಜೇಂದ್ರ ಎಂ., ಪೂಣಚ್ಚ ಎಂ.ಜಿ., ಅಯ್ಯಪ್ಪ ಪಿ.ಆರ್., ಚೇತನ್ ಜೆ. (ಗೋಲ್ ಕೀಪರ್), ಅಟಲ್ ದೇವ್ ಸಿಂಗ್ ಚಹಾಲ್ (ಗೋಲ್ ಕೀಪರ್), ಕಾರ್ಯಪ್ಪ ಕೆ.ಟಿ., ಕಾರ್ಯಪ್ಪ ಬಿ.ಜೆ. (ಕೋಚ್), ರಿಖಿ ಗಣಪತಿ (ಮ್ಯಾನೇಜರ್), ಅಪ್ಪಣ್ಣ ಸಿ.ಪಿ. (ಫಿಸಿಯೋಥೆರಪಿಸ್ಟ್).