ವೀರಾಜಪೇಟೆ, ಜ. 25: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಏಳನೇ ಬ್ಲಾಕ್‍ನ ನೆಹರೂ ನಗರದ ನಿವಾಸಿ ಸಮೀನಾ ಎಂಬಾಕೆಗೆ ಪಟ್ಟಣ ಪಂಚಾಯಿತಿ ನಿಧಿಯಿಂದ ರೂ. 10,000 ಪರಿಹಾರ ಚೆಕ್‍ನ್ನು ಪಟ್ಟಣ ಪಂಚಾಯಿತಿ ಸದಸ್ಯರಾದ ಎಂ.ಕೆ. ದೇಚಮ್ಮ, ಎಸ್.ಹೆಚ್. ಮತೀನ್ ಹಾಗೂ ಡಿ.ಪಿ. ರಾಜೇಶ್ ಅವರ ಸಮ್ಮುಖದಲ್ಲಿ ಮುಖ್ಯಾಧಿಕಾರಿ ಶ್ರೀಧರ್ ವಿತರಿಸಿದರು.
ತಾ. 10 ರಂದು ವಿದ್ಯುತ್ ಶಾರ್ಟ್ ಸಕ್ಯೂರ್ಟ್‍ನಿಂದ ಸಮೀನಾ ಅವರ ಮನೆಯಲ್ಲಿದ್ದ ಫ್ರಿಡ್ಜ್, ವಾಷಿಂಗ್ ಮೇಷಿನ್ ಸೇರಿದಂತೆ ಇತರ ಸಾಮಗ್ರಿಗಳು ಸುಟ್ಟು ಹೋಗಿದ್ದರಿಂದ ಸುಮಾರು ರೂ. 40,000 ನಷ್ಟ ಸಂಭವಿಸಿರುವದಾಗಿ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವದರೊಂದಿಗೆ ಪಟ್ಟಣ ಪಂಚಾಯಿತಿ, ತಾಲೂಕು ಕಚೇರಿಯ ಪರಿಹಾರ ವಿಭಾಗಕ್ಕೂ ದೂರು ನೀಡಲಾಗಿತ್ತು.