ಸಿದ್ದಾಪುರ, ಜ. 25: ಇಸ್ಲಾಮಿಕ್ ಕಲಾ ಮತ್ತು ಸಾಹಿತ್ಯ ಜಿಲ್ಲಾಮಟ್ಟದ 15ನೇ ವರ್ಷದ ಸ್ಪರ್ಧೆಯಲ್ಲಿ ನೆಲ್ಲಿಹುದಿಕೇರಿ ದಾರುಸ್ಸಲ್ಲಾಂ ಮದರಸ ವಿದ್ಯಾರ್ಥಿಗಳು ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಶನಿವಾರಸಂತೆಯಲ್ಲಿ ಎಸ್‍ಕೆಜೆಎಂ ವತಿಯಿಂದ ಆಯೋಜಿಸಿದ್ದ ಸ್ಪರ್ಧೆಯಲ್ಲಿ ದಾರುಸ್ಸಲ್ಲಾಂ ಮದರಸದ 40 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ 24 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆಯುವದರೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಯು ಕೇರಳದ ತಲಿಪರಂಬುವಿನಲ್ಲಿ ಜರುಗಲಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ನೆಲ್ಲಿಹುದಿಕೇರಿ ಜಮಾಅತ್ ಸಮಿತಿ ಹಾಗೂ ಮದರಸ ಅಧ್ಯಾಪಕರು ಅಭಿನಂದನೆ ಸಲ್ಲಿಸಿದ್ದಾರೆ. ದಾರುಸ್ಸಲ್ಲಾಂ ಮದರಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನ ಸಭೆಯಲ್ಲಿ ನೆಲ್ಲಿಹುದಿಕೇರಿ ಖತೀಬ್ ಹನೀಫ್ ಪೈಝಿ ಜಮಾಅತ್ ಕಾರ್ಯದರ್ಶಿ ಅಶ್ರಫ್ ಪದಾಧಿಕಾರಿ ಕೆ.ಎಂ. ಬಷಿರ್, ಅನಿಕುಟ್ಟಿ ಹಾಜಿ ಸದರ್ ಮುಅಲ್ಲಿಮ್ ತಮ್ಲೀಖ್ ಧಾರಿಮಿ, ಸೈದಲಿ ಪೈಝಿ ನಾಸೀರ್ ಧಾರಿಮಿ, ಸಮದ್ ಮೌಲವಿ ಅಶ್ರಫ್ ಬಾಖವಿ ಹಾಜರಿ ದ್ದರು. ಇದೇ ಸಂದರ್ಭ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.