ಕುಶಾಲನಗರ, ಜ. 25: ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರಿನ ದರ ಏರಿಕೆ ಮಾಡಿದ್ದು ದಿಢೀರನೆ ಭಾರೀ ಮೊತ್ತದ ಬಿಲ್ ಬಂದಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಅನಾನುಕೂಲ ಉಂಟಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಕುಶಾಲನಗರ ಅಧ್ಯಕ್ಷ ಕೆ.ಜಿ.ಮನು ಆರೋಪಿಸಿದ್ದಾರೆ. ಕನಿಷ್ಟ 800 ರೂ. ಗಳಿಂದ 1500 ರೂ. ಗಳ ತನಕ ಹೆಚ್ಚುವರಿ ಹಣ ಪಾವತಿಸಲು ಬಿಲ್ ನೀಡಲಾಗಿದ್ದು ದುಬಾರಿ ಶುಲ್ಕದಿಂದ ಕುಶಾಲನಗರ ಜನತೆಗೆ ಹೊರೆಯಾಗಿದೆ. ಇದರ ಬಗ್ಗೆ ಮಂಡಳಿ ಮರು ಪರಿಶೀಲನೆ ಮಾಡಬೇಕೆಂದು ಅವರು ಆಗ್ರಹಿಸಿದ್ದು, ತಪ್ಪಿದಲ್ಲಿ ಮಂಡಳಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.