ಒಡೆಯನಪುರ, ಜ. 25: ಸಮಿಪದ ಆಲೂರುಸಿದ್ದಾಪುರ ಸಾಯಿ ಎಜುಕೇಶನ್ ಟ್ರಸ್ಟಿನ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ವತಿಯಿಂದ ಗಣರಾಜ್ಯೋತ್ಸವ, ವಿದ್ಯಾಸಂಸ್ಥೆಯ 13ನೇ ವಾರ್ಷಿಕೋತ್ಸವದ ಅಂಗವಾಗಿ ಗ್ರಾಮೀಣ ಸೊಗಡು ಶೀರ್ಷಿಕೆಯಡಿ ಯಲ್ಲಿ ಅಂತರ್ ಶಾಲಾ ಮಟ್ಟದ ಲಗೋರಿ ಆಟದ ಸ್ಪರ್ಧೆಯನ್ನು ವಿದ್ಯಾಸಂಸ್ಥೆ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಯಿತು. ಸ್ಪರ್ಧೆಯನ್ನು ಪತ್ರಕರ್ತ ವಿ.ಸಿ. ಸುರೇಶ್ ಒಡೆಯನಪುರ ಉದ್ಘಾಟಿಸಿ ಮಾತನಾಡಿ, ಇಂದು ರಾಷ್ಟ್ರ ಮತ್ತು ಅಂತರ್ ರಾಷ್ಟ್ರಮಟ್ಟದಲ್ಲಿ ಹೆಸರನ್ನು ಪಡೆದಿರುವ ಕ್ರಿಕೆಟ್, ಕಬಡ್ಡಿ, ಖೋಖೋ ಮುಂತಾದ ಕ್ರೀಡೆಗಳು ಗ್ರಾಮೀಣ ಭಾಗದ ಪುರಾತನ ಇತಿಹಾಸವನ್ನು ಹೊಂದಿದ್ದ ಲಗೋರಿ, ಚಿನ್ನಿದಾಂಡು ಆಟಗಳಿಂದ ಹುಟ್ಟಿಕೊಂಡಿದೆ ಎಂದರು. ಲಗೋರಿ ಮೂಲತಃ ಉತ್ತರ ಭಾರತದ ಹಳ್ಳಿಗಳಲ್ಲಿ ಚಿಕ್ಕ ಮಕ್ಕಳು ಸೇರಿಕೊಂಡು ಆಟ ಆಡುತ್ತಿದ್ದರು. ಕಾಲ ಕ್ರಮೇಣ ಈ ಆಟ ಭಾರತದ ದೇಶೀಯ ಆಟವಾಗಿ ಪರಿವರ್ತನೆಗೊಂಡಿತು, ಕಬಡ್ಡಿ, ಖೋಖೋ ಮುಂತಾದ ಗ್ರಾಮೀಣ ಕ್ರೀಡೆ ಮೂಲತಃ ಲಗೋರಿಯ ಪ್ರಕಾರಗಳಾಗಿದ್ದು, ಇಂದು ರಾಷ್ಟ್ರೀಯ ಕ್ರೀಡೆಗಳಲ್ಲಿ ಒಂದಾಗಿದೆ, ಆದರೆ ಇಂದು ಕ್ರೀಡೆಯಲ್ಲೂ ಕಂಪ್ಯೂಟರ್ ನಂತಹ ಆಧುನಿಕತೆ ಪ್ರವೇಶಿಸಿರುವದ್ದರಿಂದ ಗ್ರಾಮೀಣ ಕ್ರೀಡೆಗಳು ಕಣ್ಮರೆ ಯಾಗುತ್ತಿವೆ, (ಮೊದಲ ಪುಟದಿಂದ) ಈ ನಿಟ್ಟಿನಲ್ಲಿ ಜಾನಕಿ ಕಾಳಪ್ಪ ವಿದ್ಯಾಸಂಸ್ಥೆ ವತಿಯಿಂದ ಗ್ರಾಮೀಣ ಸೊಗಡಿನ ಅಂತರ್ಶಾಲಾ ಮಟ್ಟದ ಲಗೋರಿ ಆಟದ ಸ್ಪರ್ಧೆಯನ್ನು ಹಮ್ಮಿಕೊಂಡಿರುವದು ಶ್ಲಾಘನಿಯ ಮತ್ತು ಇತರ ಶಾಲೆಗಳಿಗೆ ಮಾದರಿಯಾಗಿದ್ದು, ಲಗೋರಿ ಕ್ರೀಡೆಯನ್ನು ಮತ್ತೆ ಪರಿಚಯ ಮಾಡಿಕೊಟ್ಟಂತಾಗಿದೆ ಎಂದರು.
ವಿದ್ಯಾಸಂಸ್ಥೆ ಮೇನೆಜಿಂಗ್ ಟ್ರಸ್ಟಿ ಹೊಸೂರು ಕೆ. ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಗಳಲ್ಲಿ ಪಠ್ಯ ಚಟುವಟಿಕೆ ಜೊತೆಯಲ್ಲಿ ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಗೂ ಆದ್ಯತೆ ಕೊಡಬೇಕು, ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳು ಸಾಮಾನ್ಯವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಸೊಗಡು ಹಿನ್ನೆಲೆಯುಳ್ಳ ಗ್ರಾಮೀಣ ಭಾಗದ ದೇಶೀಯ ಕ್ರೀಡೆಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸಿಕೊಡುವ ಉದ್ದೇಶದಿಂದ ನಮ್ಮ ವಿದ್ಯಾಸಂಸ್ಥೆ ವತಿಯಿಂದ ಅಂತರ್ ಶಾಲಾ ಮಕ್ಕಳಿಗೆ ಲಗೋರಿ ಆಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಟಿ.ಪಿ.ಜೀವನ್, ಖಜಾಂಜಿ ಎಚ್.ಎಸ್. ಸರಿತ ಶಿವಪ್ರಕಾಶ್, ಎಸ್ಡಿಎಂಸಿ ಖಜಾಂಜಿ ಸಿ.ಎಂ. ಹೇಮಂತ್, ಶಾಲಾ ಮುಖ್ಯ ಶಿಕ್ಷಕ ಧನಂಜಯ್ ಮುಂತಾದವರು ಹಾಜರಿದ್ದರು. ಸ್ಪರ್ಧೆಯಲ್ಲಿ ವಿವಿಧ ಶಾಲೆಗಳಿಂದ ಬಂದ ಮಕ್ಕಳು ಹುರುಪಿನಿಂದ ಭಾಗವಹಿಸಿದ್ದರು.