ಮಡಿಕೇರಿ, ಜ. 26: ಭಾಗಮಂಡಲದಲ್ಲಿ ಮುಂದಿನ ಫೆಬ್ರವರಿ 15ರಿಂದ 23ರ ತನಕ ಆಯೋಜನೆಗೊಂಡಿದ್ದ ಅತಿರುದ್ರ ಮಹಾಯಾಗವನ್ನು; ವಿವಿಧ ಕಾರಣಗಳಿಂದ ಮುಂದೂಡಲಾಗಿದೆ ಎಂದು ವಿಶ್ವಾಸನೀಯ ಮೂಲಗಳಿಂದ ಗೊತ್ತಾಗಿದೆ. ಕಳೆದ ತಾ.15ರಂದು ನಮಾಮಿ ಕಾವೇರಿ ಸಮಿತಿ ಸಭೆಯಲ್ಲಿ ಅತಿರುದ್ರ ಮಹಾಯಾಗ ಸಂಬಂಧ ಸಾಕಷ್ಟು ಚರ್ಚೆ ನಡೆದು, ಆರ್ಥಿಕ ಹಾಗೂ ವಸ್ತುರೂಪದಲ್ಲಿ ಸಂಪನ್ಮೂಲ ಕ್ರೋಢೀಕರಿಸುವದು ಸೇರಿದಂತೆ ಇತರ ವ್ಯವಸ್ಥೆ ಬಗ್ಗೆ ಚರ್ಚಿಸಿ ಯಾಗದ ಪೂರ್ವ ತಯಾರಿ ನಡೆಸಲಾಗಿತ್ತು.ಆ ನಂತರದ ಬೆಳವಣಿಗೆಯಲ್ಲಿ ಮುಂದಿನ 20 ದಿನಗಳಲ್ಲಿ ಎಲ್ಲವನ್ನು ಹೊಂದಿಸುವದು ಕಷ್ಟಸಾಧ್ಯ ಎಂಬ ಅಭಿಪ್ರಾಯದೊಂದಿಗೆ ಯಾಗ ಸಮಿತಿ ಪದಾಧಿಕಾರಿಗಳು ದೈವಜ್ಞ ವಿಷ್ಣು ಪ್ರಸಾದ್ ಹೆಬ್ಬಾರ್ ಸಲಹೆಯಂತೆ ಫೆಬ್ರವರಿಯಲ್ಲಿ ನಡೆಸಲು ಉದ್ದೇಶಿಸಿರುವ ಯಾಗವನ್ನು ಮುಂದೂಡಿರುವದಾಗಿ ಗೊತ್ತಾಗಿದೆ.