ವೀರಾಜಪೇಟೆ, ಜ. 26: ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತ ವತಿಯಿಂದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ವೀರಾಜಪೇಟೆ ತಹಶಿಲ್ದಾರ್ ಬಿ.ಎಂ. ಗೋವಿಂದರಾಜು ಹೇಳಿದರು. ಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡಿದ ಅವರು ನನಗೆ ದೇಶ ಏನು ಕೊಟ್ಟಿದೆ ಎನ್ನುವದಕ್ಕಿಂತ ನಾನು ದೇಶಕ್ಕೆ ಏನನ್ನು ಕೊಡುತ್ತಿದ್ದೇನೆ ಎಂಬದು ಮುಖ್ಯ ಎಂದು ಹೇಳಿದರಲ್ಲದೆ ದೇಶಾಭಿಮಾನ ಬೆಳೆಸಿಕೊಳ್ಳಬೇಕೆಂದರು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ, ಕ್ಷೇತ್ರ ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ, ಕ್ಷೇತ್ರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರುಗಳನ್ನು ಸನ್ಮಾನಿಸಲಾಯಿತು.ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಉಪನ್ಯಾಸಕಿ ಅಂಬುಜಾ ಸ್ವಾಗತಿಸಿದರು. ಶಿಖ್ಕ ಚಾಲ್ಸ್‍ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಎ.ವಿ ಮಂಜುನಾಥ್ ವಂದಿಸಿದರು. ಗಣರಾಜ್ಯೋತ್ಸವ ಅಂಗವಾಗಿ ತಾಲೂಕಿನ (ಮೊದಲ ಪುಟದಿಂದ) ವಿವಿಧ ಶಾಲೆಗಳಿಂದ ಆಯೋಜಿಸಲಾಗಿದ್ದ ಸ್ತಬ್ದ ಚಿತ್ರ ಪ್ರದರ್ಶನದಲ್ಲಿ ವಿನಾಯಕ ಪ್ರೌಢಶಾಲೆಯ ಕಾರ್ಗಿಲ್ ವಿಜಯ, ಕಾವೇರಿ ಶಾಲೆಯ ವೈವಿದ್ಯತೆಯಲ್ಲಿ ಏಕತೆ, ಜೆಪಿಎನ್ ಶಾಲೆಯ ಸರ್ವಧರ್ಮ ಸಮಾಗಮ ಸಂದೇಶ, ರೋಟರಿ ಶಾಲೆಯ ಜಾತ್ಯಾತೀತತೆಯಲ್ಲಿ ಸಂವಿಧಾನದ ಲಕ್ಷಣ, ಪ್ರಗತಿ ಶಾಲೆಯ ಸ್ವರಾಜ್ಯ ನಮ್ಮ ಜನ್ಮ ಸಿದ್ದ ಹಕ್ಕು, ರೋಲಿಕ್ ಶಾಲೆಯ ಮೇರಾ ಭಾರತ್ ಮಹಾನ್ ಎಂಬ ಸ್ತಬ್ದಚಿತ್ರಗಳು ಪ್ರದರ್ಶನಗೊಂಡವು.
ತಹಶೀಲ್ದಾರ್ ಸನ್ಮಾನ : ಸರ್ಕಾರಿ ನೌಕರರಾದ ಮೇಲೆ ಯಾವ ಸ್ಥಳಗಳಲ್ಲಿಯೂ ಸೇವೆ ಮಾಡಲು ಸಿದ್ಧರಿರಬೇಕು ಎಂದು ಗೋವಿಂದರಾಜು ಹೇಳಿದರು.
ಗಣರಾಜ್ಯೋತ್ಸವ ದಿನದಂದು ಪಟ್ಟಣ ಪಂಚಾಯಿತಿ ವತಿಯಿಂದ ನಿಕಟಪೂರ್ವ ತಹಶೀಲ್ದಾರ್ ಆರ್. ಗೋವಿಂದರಾಜು ಅವರನ್ನು ಸನ್ಮಾನಿಸಲಾಯಿತು.
ಮುಖ್ಯಾಧಿಕಾರಿ ಶ್ರೀಧರ್ ತಹಶೀಲ್ದಾರ್ ಗೋವಿಂದರಾಜು ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು, ಪೌರ ಕಾರ್ಮಿಕರು ಉಪಸ್ಥಿತರಿದ್ದರು.