ಮಡಿಕೇರಿ, ಜ. 24: ಯುವ ತೇಜಸ್ಸು ಟ್ರಸ್ಟ್ ವತಿಯಿಂದ ಮಡಿಕೇರಿಯ ರೋಟರಿ ಕ್ಲಬ್ ಸಭಾಂಗಣದಲ್ಲಿ ಶ್ರೀರಕ್ಷಾ ಸೇವಾ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ದಾನಿಗಳಾದ ಸತ್ಯಜಿತ್ ಸುರತ್ಕಲ್ ಉದ್ಘಾಟಿಸಿದರು. ಸ್ವಚ್ಛ ಭಾರತ ಅಭಿಯಾನದ ರೂವಾರಿ ಕೃಷ್ಣ ಉಪಾಧ್ಯಾಯ ಮಾತನಾಡಿ, ಸ್ವಾಮಿ ವಿವೇಕಾನಂದರು ನೂರು ಮಂದಿ ಸಿಕ್ಕಿದರೆ ಸಾಕು ಇಡೀ ಸಮಾಜವನ್ನೇ ಬದಲಾಯಿಸುತ್ತೇನೆ ಎಂದು ಹೇಳಿದ್ದರು. ಯುವಕರು ಈ ದೇಶದ ಆಸ್ತಿ. ಯಾವದೇ ದುರಾಸೆಗೆ ಒಳಗಾಗದೆ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಸುಮಾರು 14 ನಿರಾಶ್ರಿತರಿಗೆ ರೂ. 2,11,356 ಲಕ್ಷ ವಿತರಿಸಲಾಯಿತು. ದಾನಿಗಳಾದ ಮಹೇಶ್‍ಗೌಡ, ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಿಲೀಪ್, ಪ್ರಮುಖರಾದ ಜಯರಾಂ ಕಲ್ಲಾಜೆ, ದಾಮೋದರ, ಟ್ರಸ್ಟ್‍ನ ಪದಾಧಿಕಾರಿಗಳು ಹಾಜರಿದ್ದರು.