ಸುಂಟಿಕೊಪ್ಪ, ಜ. 23: ಪುಸ್ತಕ ಓದುವದನ್ನು ಬರೆಯುವದನ್ನು ಹವ್ಯಾಸ ಮಾಡಿಕೊಂಡು ಮೊಬೈಲ್ ಬಳಕೆಯಲ್ಲಿ ವಿದ್ಯಾರ್ಥಿಗಳು ದೂರವಿರಬೇಕು ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಯ ಪಿಎಸ್‍ಐ ಜಯರಾಮ್ ಕಿವಿಮಾತು ಹೇಳಿದರು.
ಇಲ್ಲಿನ ಸಂತ ಅಂತೋಣಿ ಶಾಲಾ ಸಭಾಂಗಣದಲ್ಲಿ ನಡೆದ ‘ನಮ್ಮ ಸುಂಟಿಕೊಪ್ಪ ಬಳಗ'ದ ದ್ವಿತೀಯ ವಾರ್ಷಿಕೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರಿಂದ ಪಠ್ಯ, ಪಠ್ಯೇತರ ಚಟುವಟಿಕೆಗಳ ಜೊತೆಯಲ್ಲಿ ಆಟೋಟಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳದ್ದರಿಂದ ಮಾನಸಿಕವಾಗಿ ಮತ್ತು ದೈಹಿಕ ಬೆಳವಣಿಗೆ ಕುಂಠಿತವಾತ್ತದೆ ಎಂದು ಅಸಮಾಧಾನ ವ್ಕಕ್ತಪಡಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಜಾಸತ್ಯ ಪತ್ರಿಕೆಯ ಉಪಸಂಪಾದಕ ಬಿ.ಸಿ.ದಿನೇಶ್ ನೆರವೇರಿಸಿದರು. ಮಡಿಕೇರಿ ಟ್ರೈಕಲರ್ ಅಕಾಡೆಮಿಯ ನಿರ್ದೇಶಕಿ ಮೋಕ್ಷಿತ ಪಟೇಲ್ ಮಾತನಾಡಿದರು. ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ರಂಜಿತ್ ಕುಮಾರ್ ವಹಿಸಿದ್ದರು. ಸುಂಟಿಕೊಪ್ಪದಲ್ಲಿ ಹುಟ್ಟಿಬೆಳೆದು ಸಾಧನೆ ಮಾಡಿರುವವರನ್ನು ಇದೇ ಸಂದರ್ಭ ಗೌರವಿಸಿ ಸನ್ಮಾನಿಸಲಾಯಿತು.
ಸಾಹಿತ್ಯ ಮತ್ತು ಕಲಾ ಕ್ಷೇತ್ರದಲ್ಲಿ ವಹೀದ್ ಜಾನ್, ಸಮಾಜ ಸೇವೆಗಾಗಿ ಹೆಚ್.ಕೆ,ರಮೇಶ್, ಸಂಗೀತ ಸಾಧನೆಗಾಗಿ ವಿಜಯಕುಮಾರ್, ಕೃಷಿ ಕ್ಷೇತ್ರದಲ್ಲಿ ನಾಪಂಡ ಪೂಣಚ್ಚ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಹಾಗೂ ಎನ್‍ಸಿಸಿ ಸಾÀಧನೆಗಾಗಿ ಸ್ಪಂದನಾ ಸುರೇಶ್ ಇವರುಗಳಿಗೆ ಸಂಘದ ವತಿಯಿಂದ 'ಸುಂಟಿಕೊಪ್ಪದ ನಕ್ಷತ್ರಗಳು' ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಕೆ.ಎಸ್. ಅನಿಲ್ ಕುಮಾರ್ ಸ್ವಾಗತಿಸಿ ಮಹಮ್ಮದಾಲಿ ವಂದಿಸಿದರು.