ಮಡಿಕೇರಿ, ಜ. 23: ಪ್ರತಿ ದಿನ (ತನ್ನದ್ದೇ ಆದ ಸ್ವಂತ ಸಮಯದಲ್ಲಾದರೂ) ಕಸ ವಿಲೇವಾರಿ ಮಾಡುವ ವಾಹನಗಳು ಜೋರಾಗಿ ಪರಿಸರ ಪ್ರೇಮದ ಹಾಡುಗಳನ್ನು ಸಾರುತ್ತಾ ನಮ್ಮ ಮನೆಗಳ ಬುಡಕ್ಕೇ ಬಂದು ಕಸ ಸಂಗ್ರಹಿಸಿಕೊಂಡು ಹೋಗುತ್ತವೆ. ಕೆಲವೊಮ್ಮೆ ಈ ಕಸದ ಲಾರಿ ಎಷ್ಟೋ ದಿವಸ ಬಾರದಿರುªದೂÀ ಇದೆ. ಆದರೆ, ಕಸದ ಲಾರಿ ಬಂದಿಲ್ಲವೆಂದು ನಾವು ರಸ್ತೆ ಬದಿಗಳಲ್ಲಿ ಕಸ ಎಸೆಯುವದು ಎಷ್ಟು ಸರಿ?
ಮಡಿಕೇರಿಯ ಪೋಲೀಸ್ ಮೈದಾನದ ಹಿಂಬದಿಯಲ್ಲಿ ವಾಸಿಸುವ ಮನೆಯವರು ತಮ್ಮ ಮನೆಯ ಕಸವನ್ನು ಈ ರೀತಿಯಾಗಿ ಚೆಲ್ಲಾಪಿಲ್ಲಿಯಾಗಿ ಎಸೆಯುತ್ತಿದ್ದು, ಈ ದುಸ್ಥಿತಿಯ ಚಿತ್ರವನ್ನು ಕಸದ ವಿಲೇವಾರಿ ಜವಾಬ್ದಾರಿ ಹೊತ್ತಿರುವ ಓರ್ವ ಕಾರ್ಮಿಕರೇ ಕಳುಹಿಸಿ “ಇದು ಎಂತಹ ದುಃಖದ ವಿಷಯ ನೋಡಿ. ಈ ಬದಿ ನಡೆದಾಡಲೂ ಸಾಧ್ಯವಿಲ್ಲ” ಎಂದು ‘ಶಕ್ತಿ’ಯೊಂದಿಗೆ ಹಂಚಿಕೊಳ್ಳುತ್ತಾರೆ.
ನಮ್ಮ ನಗರದಲ್ಲಿ ಅಧಿಕಾರಿಗಳು ವೈಜ್ಞಾನಿಕ ಕಸ ವಿಲೇವಾರಿಯ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ ಸರಿ. ಆದರೆ, ಪ್ರತಿಯೊಬ್ಬರೂ ತಮ್ಮಿಂದಾದಷ್ಟು ರೀತಿಯಲ್ಲಿ ನಗರವನ್ನು ಸುಂದರವಾಗಿರಿಸಿ ಕೊಳ್ಳಬಹುದಲ್ಲವೇ?
-ಪ್ರಜ್ಞಾ ಜಿ.ಆರ್.