ಮಡಿಕೇರಿ, ಜ. 24: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ನಮ್ಮನೆ ಸಾಂಸ್ಕøತಿಕ ಕಲಾಕೇಂದ್ರದ ನೂತನ ಸಭಾಭವನ ಉದ್ಘಾಟನೆ ಹಾಗೂ ಸ್ನೇಹ ಮಿಲನ ಸಮಾರಂಭ ಬೆಂಗಳೂರಿನ ನಮ್ಮನೆ ಸಾಂಸ್ಕøತಿಕ ಕಲಾಕೇಂದ್ರ, 8ನೇ ಅಡ್ಡರಸ್ತೆ, 50ನೇ ಅಡಿ ಅಂದಾನಪ್ಪ ರಸ್ತೆ, ಲಾಯರ್ ಲೇಔಟ್, ಚೌಡೇಶ್ವರಿನಗರ, ಲಗ್ಗೆರೆ, ಬೆಂಗಳೂರು-58 ಇಲ್ಲಿ ಫೆಬ್ರವರಿ 10 ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಹಾಗೂ ಸಾಂಖ್ಯಿಕ ಮತ್ತು ಯೋಜನಾ ಜಾರಿ ಸಚಿವ ಡಿ.ವಿ. ಸದಾನಂದ ಗೌಡ, ಶಾಸಕರಾದ ಕೆ.ಜಿ. ಬೋಪಯ್ಯ, ಆರ್. ಮಂಜುನಾಥ್, ಸಂಜೀವ ಮಠಂದೂರು ಇತರರು ಪಾಲ್ಗೊಳ್ಳಲಿದ್ದಾರೆ.