ಮಡಿಕೇರಿ, ಜ. 23 : ಬೆಂಗಳೂರಿನ ಮಾಣಿಕ್ಷಾ ಪೆರೇಡ್ ಮೈದಾನದಲ್ಲಿ ತಾ. 26 ರಂದು ಗಣರಾಜ್ಯೋತ್ಸವದ ಪ್ರಯುಕ್ತ ನಡೆಯುವ ಪಥಸಂಚಲನದಲ್ಲಿ ಭಾಗವಹಿಸಲು ಕೊಡಗು ಜಿಲ್ಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ 7 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಎಸ್.ಎಂ.ಎಸ್. ವಿದ್ಯಾಸಂಸ್ಥೆಯ ಗೈಡ್ ವಿದ್ಯಾರ್ಥಿಗಳು : ಪಿ.ಡಿ. ಬಬಿತ, ಬಿ.ಜಿ. ಸಿಂಚನ ದೇಚಕ್ಕ, ವಂಶಿಕ ವಿ. ಆರುಶಿ ಅಯ್ಯಪ್ಪ ಕೆ., ಮಡಿಕೇರಿ ಸಂತ ಮೈಕಲರ ಪ್ರಾಥಮಿಕ ಶಾಲೆಯ ಗೈಡ್ ವಿದ್ಯಾರ್ಥಿ ಜೀವಿತ ಎಂ.ಆರ್., ಎಸ್.ಎಂ.ಎಸ್. ಎಸಿ.ಇ.ಇ., ಅರಮೇರಿ ಶಾಲೆಯ ಸ್ಕೌಟ್ಸ್ ವಿದ್ಯಾರ್ಥಿಗಳಾದ ಬೇವನ್ ಗಣಪತಿ ಎಂ.ಎ. ಮತ್ತು ವಜಿಶ್ ಎಸ್.ಬಿ. ಇವರು ತಾ. 19 ರಿಂದ ಬೆಂಗಳೂರಿನಲ್ಲಿ ಸ್ಕೌಟ್ ಮಾಸ್ಟರ್ ಭೀಮಯ್ಯ, ಗೈಡ್ ಕ್ಯಾಪ್ಟನ್ ಮೈಥಿಲಿರಾವ್ ನೇತೃತ್ವದಲ್ಲಿ ಪಥಸಂಚಲನದ ಪೂರ್ವ ಸಿದ್ಧತಾ ತರಬೇತಿಯಲ್ಲಿ ತೊಡಗಿದ್ದರು. ರಾಜ್ಯದ ಭಾರತ ಸ್ಕೌಟ್ಸ್ ಗೈಡ್ಸ್ ತಂಡದ ನಾಯಕಿಯಾಗಿ ಬಿ.ಡಿ. ಬಬಿತ ತಂಡವನ್ನು ಮುನ್ನಡೆಸಲು ಆಯ್ಕೆಯಾಗಿದ್ದಾರೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕಂಬೀರಂಡ ಕಾಳಪ್ಪ ಅವರು ತಿಳಿಸಿದ್ದಾರೆ.