ಸೋಮವಾರಪೇಟೆ, ಜ. 24: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ನೂತನ ಸದಸ್ಯರ ಗುರುತಿನ ಚೀಟಿಯನ್ನು ಒಕ್ಕಲಿಗರ ಸಮುದಾಯ ಭವನದಲ್ಲಿ ವಿತರಿಸಲಾಯಿತು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಎಚ್.ಕೆ.ಶೇಖರ್ ಅವರುಗಳು ಗುರುತಿನ ಚೀಟಿಗಳನ್ನು ವಿತರಿಸಿದರು. ತಾಲೂಕು ಸಂಘದ ಪದಾಧಿಕಾರಿ ಗಳಾದ ಎಚ್.ಪಿ.ರಾಜಪ್ಪ, ಕೆ.ಆರ್. ಕೊಮಾರಪ್ಪ ಇದ್ದರು. ಮಡಿಕೇರಿ, ಸೋಮವಾರಪೇಟೆ, ಶನಿವಾರಸಂತೆಯಲ್ಲಿ ಸದಸ್ಯರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ ಎಂದು ಸಂಘದ ನೌಕರರಾದ ಕಮಲ ತಿಳಿಸಿದರು.