ಚೆಟ್ಟಳ್ಳಿ, ಜ. 24: ಸಮೀಪದ ಕಂಡಕರೆಯ ಹಯಾತುಲ್ ಇಸ್ಲಾಂ ಮದರಸದಲ್ಲಿ ಜಿಲ್ಲಾ ಮಟ್ಟದ ಸುನ್ನಿ ಜಂಯ್ಯತುಲ್ ಮುಹಲ್ಲಿಮೀನ್ ಇದರ ಇಸ್ಲಾಮಿಕ್ ಕಲೋತ್ಸವದಲ್ಲಿ ಮೂರ್ನಾಡು ರೇಂಜ್ 175 ಅಂಕ ಗಳೊಂದಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ನಾಪೋಕ್ಲು ರೇಂಜ್ 167 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರೆ, 164 ಅಂಕಗಳಿಸಿ ಪಾಲಿಬೆಟ್ಟ ರೇಂಜ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡರು.
ಸೋಮವಾರಪೇಟೆ, ಪಾಲಿಬೆಟ್ಟ, ವಿರಾಜಪೇಟೆ, ಮೂರ್ನಾಡು, ನಾಪೋಕ್ಲು ಸೇರಿ ಒಟ್ಟು 5 ರೇಂಜ್ ಗಳಿಂದ 200 ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಕಲೋತ್ಸವದಲ್ಲಿ ಪಾಲ್ಗೊಂಡಿ ದ್ದರು. ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಹಾಗೂ ಜನರಲ್ ವಿಭಾಗದಲ್ಲಿ, ಕನ್ನಡ ಭಾಷಣ, ರಸಪ್ರಶ್ನೆ, ಕವಾಲಿ, ಪೋಸ್ಟರ್ ಡಿಸೈನ್, ಕನ್ನಡ ಭಾಷಣ, ದಫ್ ಸೇರಿ ಒಟ್ಟು 35ಕ್ಕೂ ಹೆಚ್ಚು ವಿವಿಧ ಸ್ಪರ್ಧೆಗಳು ನಡೆಯಿತು. ಜೂನಿಯರ್ ವಿಭಾಗದಲ್ಲಿ ಮೂರ್ನಾಡು 41 ಅಂಕ ಪಡೆದು ಪ್ರಥಮ ಸ್ಥಾನ ಪಡೆಯಿತು. ಸೋಮವಾರಪೇಟೆ 38 ಅಂಕಗಳಿಸಿ ದ್ವಿತೀಯ ಸ್ಥಾನಪಡೆದರೆ, ಪಾಲಿಬೆಟ್ಟ 35 ಅಂಕಗಳನ್ನು ಪಡೆದು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಜೂನಿಯರ್ ವಿಭಾಗದಲ್ಲಿ ನಾಪೋಕ್ಲು 54 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು ತಮ್ಮದಾಗಿಸಿ ಕೊಂಡರು. ಮೂರ್ನಾಡು 53 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರೆ, ಪಾಲಿಬೆಟ್ಟ ತೃತೀಯ ಸ್ಥಾನವನ್ನು ಪಡೆದುಕೊಂಡರು.
ಸೀನಿಯರ್ ವಿಭಾಗದಲ್ಲಿ 53 ಅಂಕಗಳೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಮೂರ್ನಾಡು 53 ಅಂಕಗಳಿಸಿ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ನಾಪೋಕ್ಲು 51 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದರೆ, 44 ಅಂಕಗಳಿಸಿ ಪಾಲಿಬೆಟ್ಟ ರೇಂಜ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇಸ್ಲಾಮಿಕ್ ಕಲೋತ್ಸವದ ವೈಯಕ್ತಿಕ ಚಾಂಪಿಯನ್ ಪಟ್ಟವನ್ನು (ಕಲಾ ಪ್ರತಿಭೆ) ಮೂರ್ನಾಡು ರೇಂಜ್ನ ಶಹೀರ್ ಪಡೆದುಕೊಂಡರು.
ಕಲೋತ್ಸವದ ತೀರ್ಪುಗಾರರಾಗಿ ಸಿರಾಜ್ ಮಾಸ್ಟರ್ ಕಣ್ಣೂರ್, ಯೂಸುಫ್ ಮುಸ್ಲಿಯಾರ್, ಖಾದರ್ ಮುಸ್ಲಿಯಾರ್, ಹನೀಫ್ ಸಖಾಫಿ, ಹಾಗೂ ಇಬ್ರಾಹಿಂ ಸಖಾಫಿ ಕಾರ್ಯನಿರ್ವಹಿಸಿದರು.
ಈ ಸಂದರ್ಭ ಕೊಡಗು ಜಿಲ್ಲಾ ನೂತನ ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ರಾಗಿ ಆಯ್ಕೆಯಾದ ಅಜೀಜ್ ಸಖಾಫಿ ಕೊಡ್ಲಿಪೇಟೆ ಅವರನ್ನು ಎಸ್.ಜೆ.ಎಂ. ವತಿಯಿಂದ ಸನ್ಮಾನಿಸ ಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಮೀದ್ ಮುಸ್ಲಿಯಾರ್ ವಹಿಸಿದ್ದರು. ಉದ್ಘಾಟನಾ ಭಾಷಣವನ್ನು ಜಿಲ್ಲಾ ಎಸ್.ಜೆ.ಎಂ. ಅಧಕ್ಷ ಮುಸ್ತಫಾ ಸಖಾಫಿ ಮಾಡಿದರು. ಪ್ರಾರ್ಥನೆ ಯನ್ನು ಖಾತಿಂ ತಂಙಲ್ ನೆರವೇರಿಸಿ ದರು. ಕಲೋತ್ಸವದ ಕನ್ವೀನರ್ ಅಬೂಬಕರ್ ಮುಸ್ಲಿಯಾರ್ ಸ್ವಾಗತಿಸಿ, ವಂದಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಹಸೈನಾರ್ ಮಹ್ಳರಿ, ಹಾರಿಸ್ ಸಖಾಫಿ, ಕಂಡಕರೆ ಮಹಲ್ ಅಧ್ಯಕ್ಷ ಆಲಿ ಉಸ್ತಾದ್, ಕಾರ್ಯದರ್ಶಿ ಗಫೂರ್ ಸಾಹೇಬ್, ಗ್ರಾಮ ಪಂಚಾಯಿತಿ ಸದಸ್ಯರಾದ ರಫಿ, ರಜಾಕ್, ಗಫೂರ್ ಮತ್ತಿತ್ತರರು ಇದ್ದರು.
- ಕೆ.ಎಂ. ಇಸ್ಮಾಯಿಲ್