ಗೋಣಿಕೊಪ್ಪಲು, ಜ. 24: ಫ್ಲಾಂಟೇಷನ್ ಉದ್ಯಮ ಉಳಿಸಿ, ಬೆಳೆಸಬೇಕು. ನಾವೂ ಬದುಕಬೇಕು, ಬೆಳೆಯಬೇಕು.ಈ ದೇಶದ ಬಹುದೊಡ್ಡ ಕೈಗಾರಿಕೆ ಮತ್ತು ಕೃಷಿ ಕೈಗಾರಿಕೆಯಾದ ಫ್ಲಾಂಟೇಷನ್ ಉದ್ಯಮ ಕೋಟ್ಯಾಂತರ ಜನರಿಗೆ ಬದುಕು ನೀಡಿದೆ. ಪರಿಸರ ಸಮತೋಲನಕ್ಕೆ ಕಾರಣವಾಗಿದೆ. ಇಂತಹ ಉದ್ಯಮವನ್ನು ಸರ್ಕಾರವೂ ಉಳಿಸಲು ಚಿಂತನೆ ಮಾಡಬೇಕಾಗಿದೆ. ಇಲ್ಲವೇ ಫ್ಲಾಂಟೇಷನ್ನಲ್ಲಿ ಉದ್ಯೋಗ ನಿರ್ವಹಿಸುತ್ತಿರುವವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ‘ದಿ ಎಸ್ಟೇಟ್ ಸ್ಟಾಪ್ಸ್ ಯೂನಿಯನ್ ಆಫ್ ಸೌತ್ ಇಂಡಿಯಾ’ದ ಕಾರ್ಯಾಧ್ಯಕ್ಷರಾದ ಕೊಟ್ಟಾಯಂನ ಪಿ.ಆರ್. ಥೋಮಸ್ ಅಭಿಪ್ರಾಯಪಟ್ಟರು.
ಪಾಲಿಬೆಟ್ಟ ಟಾಟಾ ಕಾಫಿ ಸ್ಪೋಟ್ರ್ಸ್ ಕ್ಲಬ್ ಸಭಾಂಗಣದಲ್ಲಿ ಜರುಗಿದ ಫ್ಲಾಂಟೇಷನ್ ನೌಕರರ ಕೊಡಗು ಘಟಕದ 43ನೇ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ ಮಾತನಾಡಿ, ಕಳೆದ 50 ವರ್ಷಗಳಿಂದ ನೌಕರರ ಭವಿಷ್ಯದ ವಿಚಾರವಾಗಿ ಇಎಸ್ಯುಎಸ್ಐ ಸಂಘವು ಉಪಾಸಿ ಸಂಘದೊಂದಿಗೆ ವೇತನ ಒಪ್ಪಂದ ಮಾಡಿಕೊಂಡು ಬಂದಿದೆ. ಕೊಡಗು ಜಿಲ್ಲೆ ಹಲವು ತೋಟಗಳ ನೌಕರರು ನಮ್ಮ ಸಂಘವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಸಂಘದ ಶಕ್ತಿ ಮತ್ತಷ್ಟು ಹೆಚ್ಚಲು ಅಧಿಕ ನೌಕರರು ಸಂಘದ ಸದಸ್ಯತನ ಹೊಂದಿಕೊಳ್ಳಲು ಕರೆ ನೀಡಿದರು.
ಸಂಘದ ಕೊಡಗು ಘಟಕದ ಅಧ್ಯಕ್ಷ ಮುರುಳಿಮೋಹನ್ದಾಸ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮ ದಲ್ಲಿ ಪದಾಧಿಕಾರಿಗಳಾದ ಹೆಚ್. ಸುಧಾಕರ್ಶೆಟ್ಟಿ,ಪದ್ಮಿನಿ ನವನೀಶ್, ಅಣ್ಣುಪೂಜಾರಿ ಮಾತನಾಡಿದರು. ಸಂಘದ ಸದಸ್ಯರುಗಳ ಪರವಾಗಿ ಮಲ್ಲೇಶ್, ಕೃಷ್ಣ, ಶೇಖರ್, ಮಂಜು, ರಮೇಶ್, ಜಯಲಕ್ಷ್ಮಿ, ಅಬೂಬಕರ್ ಮುಂತಾದವರು ನೌಕರರ ಸಮಸ್ಯೆ, ಪರಿಹಾರ ಮಾರ್ಗದ ಬಗ್ಗೆ ಮಾತನಾಡಿದರು. ಕಾರ್ಯದರ್ಶಿ ಸಿ.ಜಿ.ತಮ್ಮಯ್ಯ ಸ್ವಾಗತ, ನಿರೂಪಣೆ, ಝೀ ಟಿ.ವಿ. ಸಂಗೀತ ಪ್ರತಿಭೆ ರಕ್ಷಿತ್ ಪಾಣತ್ತಲೆ ಪ್ರಾರ್ಥನೆ ಹಾಗೂ ಬೋಪಣ್ಣ ವಂದಿಸಿದರು.
ಮುಂದಿನ ಐದು ವರ್ಷದ ಅವಧಿಗೆ ಕೊಡಗು ಘಟಕದ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷರಾದ ಮುರುಳಿಮೋಹನ್ದಾಸ್ ಅವರನ್ನು ಪುನರಾಯ್ಕೆ ಮಾಡಲಾಯಿತು.
ಉಪಾಧ್ಯಕ್ಷರುಗಳಾಗಿ ಜಯಲಕ್ಷ್ಮಿ, ಪದ್ಮಿನಿ ನವನೀಶ್, ವಿ.ಟಿ. ಮೋಹನ್, ಬೋಪಣ್ಣ ಮತ್ತು ಇ.ಎನ್. ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಸಿ.ಜಿ. ತಮ್ಮಯ್ಯ (ಪುನರಾಯ್ಕೆ), ಸಹ ಕಾರ್ಯದರ್ಶಿಗಳಾಗಿ ಪ್ರದೀಪ್, ತುಳಸಿಮಾಲಾ, ಕೃಷ್ಣ ಕಿರಣ್, ಗಣೇಶ್ ಮತ್ತು ಮಂಜು ಮತ್ತು 25ಕ್ಕೂ ಅಧಿಕ ನೌಕರರನ್ನು ಸಂಘದ ಕಾರ್ಯಕಾರಿ ಸಮಿತಿಗೆ ಆಯ್ಕೆಮಾಡಲಾಯಿತು.
-ಟಿ.ಎಲ್. ಶ್ರೀನಿವಾಸ್