ಮಡಿಕೇರಿ, ಜ. 23: ಮೂರ್ನಾಡು ಪದವಿ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗ್ರಂಥಾಲಯವನ್ನು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಪಿ. ಸುನಿಲ್ ಸುಬ್ರಮಣಿ, ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು, ದೇಶಕ್ಕಾಗಿ ಏನಾದರು ಒಳಿತು ಮಾಡುವ ಚಿಂತನೆ ಮಾಡಬೇಕು. ಪ್ರತಿಯೊಬ್ಬರು ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಾಗದಿದ್ದರೂ ಉತ್ತಮ ಪ್ರಜೆಗಳಾಗಬೇಕು ಎಂದರು.
ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ದಾನಿಗಳಾದ ಬಡುವಂಡ ಪೂಣಚ್ಚ ಹಾಗೂ ಪೆಮ್ಮುಡಿಯಂಡ ಮಂದಣ್ಣ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ, ಉಪಾಧ್ಯಕ್ಷ ಪುದಿಯೊಕ್ಕಡ ಸಿ. ಸುಬ್ರಮಣಿ, ಕಾರ್ಯದರ್ಶಿಗಳಾದ ಚೌರೀರ ಎಂ. ಪೆಮ್ಮಯ್ಯ, ಖಜಾಂಚಿಗಳಾದ ಬಡುವಂಡ ಪಿ. ಸುಬ್ರಮಣಿ, ನಿರ್ದೇಶಕರುಗಳಾದ ಈರಮಂಡ ಯು. ಸೋಮಣ್ಣ, ತೇಲಪಂಡ ಶೈಲಾ ಪಳಂಗಪ್ಪ, ನಂದೇಟ್ಟಿರ ಪಿ. ರಾಜಮಾದಪ್ಪ, ಪಳಂಗಂಡ ಬಿ. ಪೂವಯ್ಯ, ಪೆಮ್ಮುಡಿಯಂಡ ಎಂ. ಅಪ್ಪಣ್ಣ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ದೇವಕಿ, ಪ್ರೌಢ ಶಾಲೆಯ ಮುಖ್ಯೊಪಾಧ್ಯಾಯಿನಿ ರಶ್ಮಿ, ಪ್ರಾಥಮಿಕ ಶಾಲೆಯ ಮುಖ್ಯಸ್ಥ ಪ್ರಶಾಂತ್ ಹಾಗೂ ವಿದ್ಯಾಸಂಸ್ಥೆಯ ಎಲ್ಲಾ ಶಿಕ್ಷಕ ವರ್ಗದವರು ವಿದ್ಯಾರ್ಥಿಗಳು ಹಾಜರಿದ್ದರು.