ಮಡಿಕೇರಿ, ಜ. 23: ಗಣರಾಜ್ಯೋತ್ಸವದ ಅಂಗವಾಗಿ ಟೀಮ್ ಮೋದಿ ಸಂಘಟನೆ ವತಿಯಿಂದ ತಾ. 26ರಂದು ತಿರಂಗ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ತಿರಂಗ ಯಾತ್ರೆಯ ಅಂಗವಾಗಿ ಬೃಹತ್ ವಾಹನ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮ ಬಳಿಯಿಂದ ಬೆಳಗ್ಗೆ 10.30ಕ್ಕೆ ಪ್ರಾರಂಭವಾಗುವ ವಾಹನ ಜಾಥಾಕ್ಕೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಲಿದ್ದಾರೆ.

ಗೋಣಿಕೊಪ್ಪಲು ಬಸ್ ನಿಲ್ದಾಣದ ಬಳಿ ಸಮಾರೋಪ ಸಮಾರಂಭ ನಡೆಯಲಿದೆ ಸಮಾರೋಪ ಸಮಾರಂಭದ ಮುಖ್ಯ ಭಾಷಣಕಾರರಾಗಿ ಟೀಂ ಮೋದಿ ಸಂಘಟನೆಯ ಪ್ರಮುಖರಾದ ಸಂತೋಷ್ ಸಾಮ್ರಾಟ್ ಪಾಲ್ಗೊಳ್ಳಲಿದ್ದಾರೆ.. ಜಿಲ್ಲಾ ಸಮಿತಿ ಪ್ರಮುಖರಾದ ಕುಲದೀಪ ಪೂಣಚ್ಚ ಹಾಗೂ ವೀರಾಜಪೇಟೆ ತಾಲೂಕು ಪ್ರಮುಖರಾದ ಸಚಿನ್ ಮಂದಣ್ಣ ಉಪಸ್ಥಿತರಿರುವರು.