ಮಡಿಕೇರಿ, ಜ. 24: ಮಡಿಕೇರಿ ಯೂತ್ ಕ್ರಿಕೆಟ್ ಕ್ಲಬ್ (ಎಂವೈಸಿಸಿ) ಆಯೋಜಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಮಡಿಕೇರಿಯ ಕಂಚಿ ಕಾಮಾಕ್ಷಿ ಯೂತ್ ಕ್ರಿಕೆಟ್ ಕ್ಲಬ್ (ಕೆವೈಸಿಸಿ) ವಿಜೇತ ತಂಡವಾಗಿ ಹೊರಹೊಮ್ಮಿತು
ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆದ ಪಂದ್ಯಾವಳಿಯ ಫೈನಲ್ ಪಂದ್ಯಾಟದಲ್ಲಿ ಮಡಿಕೇರಿಯ ಕಂಚಿ ಕಾಮಾಕ್ಷಿ ಯೂತ್ ಕ್ರಿಕೆಟ್ ಕ್ಲಬ್ ಮತ್ತು ವಿಮಲ್ಸ್ ಕ್ಲಬ್ನ ನಡುವೆ ಅಂತಿಮ ಪಂದ್ಯಾಟ ನಡೆಯಿತು
ಟಾಸ್ ಗೆದ್ದ ಕಂಚಿ ಕಾಮಾಕ್ಷಿ ಯೂತ್ ಕ್ಲಬ್ ಕ್ಷೇತ್ರರಕ್ಷಣೆ ಆಯ್ಕೆ ಮಾಡಿತು. ವಿಮಲ್ಸ್ ತಂಡ 14 ಓವರ್ನಲ್ಲಿ 91 ರನ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. 91 ರನ್ ಬೆನ್ನತ್ತಿದ ಕಂಚಿಕಾಮಾಕ್ಷಿ ಯೂತ್ ಕ್ರಿಕೆಟ್ ಕ್ಲಬ್ (ಕೆವೈಸಿಸಿ) 11 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿ ಸರಣಿಯನ್ನು ತನ್ನದಾಗಿಸಿ ಕೊಂಡಿತು. ಮಡಿಕೇರಿ ಯೂತ್ ಕ್ರಿಕೆಟ್ ಕ್ಲಬ್ನ (ಎಂವೈಸಿಸಿ) ಟ್ರೋಫಿಯನ್ನು ಕಂಚಿ ಕಾಮಾಕ್ಷಿ ಯೂತ್ ಕ್ರಿಕೆಟ್ ಕ್ಲಬ್ (ಕೆವೈಸಿಸಿ) ತನ್ನದಾಗಿಸಿಕೊಂಡಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು 4 ವಿಕೆಟ್ ಕಬಳಿಸಿದ್ದಕ್ಕೆ ಕುಂಭಗೌಡನ ಶ್ರವಣ್ಗೆ ನೀಡಲಾಯಿತು.
ಸರಣಿಯಲ್ಲಿ ಒಟ್ಟು ಹದಿನಾಲ್ಕು ಕೊಡಗಿನ ಪ್ರತಿಷ್ಠಿತ ಲೆದರ್ ಬಾಲ್ ತಂಡಗಳು ಭಾಗವಹಿಸಿದ್ದವು. ಜಿಲ್ಲಾ ಮಟ್ಟದ ಸರಣಿ ಇದಾಗಿತ್ತು. ಈ ಸಂದರ್ಭ ಎಂವೈಸಿಸಿ ಅಧ್ಯಕ್ಷ ಕೆ.ಎಂ. ಗಣೇಶ್ ಉತ್ತಪ್ಪ ಹಾಗೂ ಪದಾಧಿಕಾರಿಗಳು ಹಾಜರಿದ್ದರು.