ಮಡಿಕೇರಿ, ಜ. 22: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಇಬ್ಬರು ಎನ್‍ಸಿಸಿ ಕೆಡೆಟ್‍ಗಳು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟನ್ನು ಪ್ರತಿನಿಧಿಸಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ದ್ವಿತೀಯ ಬಿಎ ಇಜೆಎಸ್ ವಿದ್ಯಾರ್ಥಿ ಪೊನ್ನಣ್ಣ ಎನ್ ಎನ್, ರಾಜ್‍ಪಥ್ ಪರೇಡ್‍ನಲ್ಲಿ ಭಾಗವಹಿಸಲಿದ್ದು, ಇನ್ನೋರ್ವ ಕೆಡೆಟ್ ದ್ವಿತೀಯ ಬಿಕಾಂ ವಿದ್ಯಾರ್ಥಿ ತೇಜಸ್ ಬಿ.ಎಸ್., ಪ್ರಧಾನಮಂತ್ರಿ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.ಕೆಡೆಟ್ ಪೊನ್ನಣ್ಣ ಎನ್.ಎನ್., ಕಾರುಗುಂದ ಗ್ರಾಮದ ನಾಪಂಡ ನಂಜಪ್ಪ ಎನ್.ಕೆ. ಹಾಗೂ ನಯನ ಎನ್.ಎನ್ ದಂಪತಿಯ ಪುತ್ರರಾಗಿದ್ದು, ಕೆಡೆಟ್ ತೇಜಸ್ ಬಿ.ಎಸ್., ನಗರದ ಮಹದೇವಪೇಟೆಯ ಗದ್ದಿಗೆ ನಿವಾಸಿ ಶ್ರೀಧರ್ ಬಿ.ಎಸ್. ಹಾಗೂ ಶೀಲಾ ಬಿ.ಎಸ್. ದಂಪತಿಯ ಪುತ್ರರಾಗಿದ್ದಾರ

ಇವರುಗಳು ಕೊಡಗು, ಸುಳ್ಯ ಹಾಗೂ ಪುತ್ತೂರು ಕಾಲೇಜುಗಳನ್ನೊಳÀಗೊಂಡ 19 ಕರ್ನಾಟಕ ಬೆಟಾಲಿಯನ್ನಿನ ಪುರುಷರ ವಿಭಾಗದಲ್ಲಿ ಆಯ್ಕೆಯಾದ ಇಬ್ಬರೇ ವಿದ್ಯಾರ್ಥಿಗಳಾಗಿದ್ದಾರೆ.

ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಡಿ. ತಿಮ್ಮಯ್ಯ ಅವರ ಪ್ರೋತ್ಸಾಹ ಹಾಗೂ ಕಾಲೇಜಿನ ಎನ್‍ಸಿಸಿ ಅಧಿಕಾರಿ ಮೇಜರ್ ರಾಘವ ಬಿ. ಅವರ ಮಾರ್ಗದರ್ಶನದಲ್ಲಿ ಈ ಇಬ್ಬರು ವಿದ್ಯಾರ್ಥಿಗಳು 19 ಕರ್ನಾಟಕ ಬೆಟಾಲಿಯನ್ನಿನ ಕಮಾಂಡಿಂಗ್ ಆಫೀಸರ್ ಕರ್ನಲ್ ವಿ.ಎಂ. ನಾಯಕ್ ಮತ್ತು ಆಡಳಿತ ಅಧಿಕಾರಿ ಕರ್ನಲ್ ಸಂಜಯ್ ಆಪ್ಟೆ ಇವರ ನೇತೃತ್ವದಲ್ಲಿ ತರಬೇತಿ ಪಡೆದು, ತಾ. 26 ರಂದು ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್’ನಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದೆ.