ವೀರಾಜಪೇಟೆ, ಜ. 22: ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮನೋಸ್ಥ್ಯೆರ್ಯವನ್ನು ಕುಗ್ಗಿಸುವ ಕೆಲಸವನ್ನು ಕೆಲವು ಸಂಘಟನೆಗಳು ಮಾಡುತ್ತಿದ್ದು ಅವರ ವಿರುದ್ದ ಹೋರಾಟ ನಡೆಸುವದು ಅನಿವಾರ್ಯ ಎಂದು ಜಾಗೃತ ನಾಗರಿಕರ ವೇದಿಕೆ ಸಂಚಾಲಕ ಕೆ.ಸಿ ಶಬರೀಶ್ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭೂ ಮಾಪನಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಪಿ ಷಂಶುದ್ದಿನ್ ಅವರು ಸಾರ್ವಜನಿಕ ಹಿತಾಸಕ್ತಿಗನುಗುಣವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಯಾರ ಒತ್ತಡಕ್ಕೂ ಮಣಿಯುತ್ತಿಲ್ಲ. ವೀರಾಜಪೇಟೆ ಸರ್ವೆ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಬಾಕಿ ಇದ್ದ ಕಡತಗಳನ್ನು ವಿಲೇವಾರಿ ಮಾಡಿದ್ದಾರೆ. ಕಚೇರಿ ಸಮಯದಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ವಯೋವೃದ್ದರು, ವಿಕಲಚೇತನರನ್ನು ಕರೆದು ಕೆಲಸ ಮಾಡಿಕೊಡುವ ಮನೋಭಾವನೆ ಹೊಂದಿರುವ ಇವರನ್ನು ಕೆಲವು ಸಂಘಟನೆಗಳು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವರ್ಗಾವಣೆ ಮಾಡಬೇಕೆಂದು ಹುನ್ನಾರ ನಡೆಸುತ್ತಿರುವದು ಹಾಸ್ಯಾಸ್ಪದವಾಗಿದೆ.

ತಮ್ಮ ಪ್ರತಿಷ್ಠೆ ಹಾಗೂ ಸಂಘಟನೆಯ ಧ್ಯೇಯೋದ್ದೇಶಗಳು ಮುಖ್ಯವಾಗಿದ್ದು ಪ್ರಾಮಾಣಿಕ ಅಧಿಕಾರಿಗಳ ಸೇವೆ ಇವರಿಗೆ ಬೇಕಾಗಿಲ್ಲ. ಹಿಂದೆಯೂ ಈ ಸಂಘಟನೆ ಪ್ರಾಮಾಣಿಕ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಮೊಕದ್ದಮೆ ದಾಖಲಿಸಿಕೊಂಡಿದೆ. ಅಧಿಕಾರಿಯ ವಿರುದ್ದ ಹೋರಾಟ ನಡೆಸುತ್ತಿರುವ ದನ್ನು ತೀವ್ರವಾಗಿ ಖಂಡಿಸುತ್ತೇವೆ. ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿದರೆ ವಿವಿಧ ಸಂಘ ಸಂಸ್ಥೆಗಳ ಜೊತೆಗೂಡಿ ಹೋರಾಟ ನಡೆಸಲಾಗುವದು ಎಂದು ಹೇಳಿದರು.

ಜಾಗೃತ ನಾಗರಿಕ ವೇದಿಕೆ ಅಧ್ಯಕ್ಷ ಚುಪ್ಪಾ ನಾಗರಾಜ್ ಮಾತನಾಡಿ ಹೋರಾಟಗಳನ್ನು ನಡೆಸಿ ಅಧಿಕಾರಿಗಳ ಮನೋಸ್ಥ್ಯೆರ್ಯವನ್ನು ಕುಗ್ಗಿಸಿದರೆ ಇತರ ಪ್ರಾಮಾಣಿಕತೆಯ ಅಧಿಕಾರಿಗಳಿಗೂ ತೊಂದರೆಯಾಗು ತ್ತದೆ. ಅವರ ವಿರುದ್ಧ ಕೆಲವು ಸಂಘಟನೆ ಗಳು ಆರೋಪ ಹೊರಿಸುತ್ತಿರುವದು ಸಾಮಾನ್ಯವಾಗಿ ನಾಗರಿಕರು ತಲೆ ತಗ್ಗಿಸುವ ಮಟ್ಟಕ್ಕೆ ತಲಪಿದೆ. ಯಾವದೇ ಕಾರಣಕ್ಕೂ ಇಂತಹ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗವಾಗಲು ನಮ್ಮ ಸಂಘಟನೆ ಬಿಡುವದಿಲ್ಲ ಎಂದರು.

ಗೋಷ್ಠಿಯಲ್ಲಿ ವೇದಿಕೆಯ ನಿರ್ದೇಶಕರುಗಳಾದ ಪಟ್ಟಡ ರಂಜಿ ಪೂಣಚ್ಚ, ಮಂಡೇಟಿರ ಅನಿಲ್ ಅಯ್ಯಪ್ಪ, ಕುಂಞÂರ ಸುನು ಸುಬ್ಬಯ್ಯ ಉಪಸ್ಥಿತರಿದ್ದರು.