ಮಡಿಕೇರಿ, ಜ. 22: ತಾ. 13 ರಂದು ಬಿಡುಗಡೆಯಾದ ಕತ್ತಲೆಯ ಕಿರಣ ಕಾದಂಬರಿಯ 210 ಪ್ರತಿ ಗಳನ್ನು ಕೊಡಗು ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಉಚಿತವಾಗಿ ವಿತರಿಸ ಲಾಯಿತು. ಕಾದಂಬರಿಕಾರ ಜಗದೀಶ್ ಐಮಂಡ ತಮ್ಮ ಕಾದಂಬರಿಯ ಪ್ರತಿಗಳನ್ನು ಗ್ರಂಥಾಲಯ ಮೇಲ್ವಿಚಾರಕರಾದ ಲೀಲಾವತಿ ಅವರಿಗೆ ಹಸ್ತಾಂತರಿಸಿದರು. ಈ ಪ್ರತಿಗಳನ್ನು ಕೊಡಗು ಜಿಲ್ಲೆಯ ಎಲ್ಲಾ 105 ಗ್ರಾಮಿಣ ಗ್ರಂಥಾಲಯಕ್ಕೆ ಸರಬರಾಜು ಮಾಡುವದಾಗಿ ಲೀಲಾವತಿ ಅವರು ತಿಳಿಸಿದರು. ಕಾದಂಬರಿಕಾರ ಜಗದೀಶ್ ಐಮಂಡ ಅವರು ಅನಿವಾಸಿ ಭಾರತೀಯರಾಗಿದ್ದು, ತಮ್ಮ ಕೃತಿಯ ಮೂಲಕ ಯುವಜನತೆಗೆ ಸಂದೇಶ ನೀಡಿರುವದಾಗಿ ತಿಳಿಸಿದ್ದಾರೆ.