ಮಡಿಕೇರಿ, ಜ. 21: ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಗೌರವ ಸೂಚಿಸುವ ಸಲುವಾಗಿ ಕರ್ನಾಟಕ ರಾಜ್ಯ ಸರಕಾರ ತಾ. 22ರಂದು (ಇಂದು) ಸರಕಾರಿ ರಜೆ ಘೋಷಣೆ ಮಾಡಿದೆ. ಅಲ್ಲದೆ, 3 ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆ ಘೋಷಣೆ ಮಾಡಿದೆ.ಪರೀಕ್ಷೆ ಮುಂದೂಡಿಕೆ ಸರಕಾರ ತಾ. 22ರಂದು ಮಂಗಳವಾರದಂದು ಸಾರ್ವಜನಿಕ ರಜೆ ಘೋಷಿಸಿ ಆದೇಶಿಸಿರುವದರಿಂದ ತಾ. 22ರಂದು (ಇಂದು) ನಡೆಯಬೇಕಿದ್ದ ದ್ವಿತೀಯ ಪಿಯುಸಿ ಆಂಗ್ಲಭಾಷೆಯ ಪೂರ್ವ ಸಿದ್ಧತಾ ಪರೀಕ್ಷೆಯನ್ನು ತಾ. 23ಕ್ಕೆ ಮುಂದೂಡಿ ರುವದಾಗಿ ಪ.ಪೂ.ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.ಸಭೆ ಮುಂದೂಡಿಕೆ ಡಾ. ಶಿವಕುಮಾರ ಮಹಾಸ್ವಾಮೀಜಿ ನಿಧನರಾದ ಪ್ರಯುಕ್ತ ರಾಜ್ಯ ಸರಕಾರವು ದಿವಂಗತರ ಗೌರವಾರ್ಥ ತಾ. 22ರಂದು ಸಾರ್ವಜನಿಕ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ತಾ. 22ರಂದು (ಇಂದು) ನಡೆಯಬೇಕಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ 2018-19ನೇ ಸಾಲಿನ ತೃತೀಯ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ.