ಹೆಬ್ಬಾಲೆ, ಜ.21: ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ 25 ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಗುರುಗಳನ್ನು ಗುರುತಿಸಿ ಅವರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸುವ ಮೂಲಕ ಹಳೆಯ ವಿದ್ಯಾರ್ಥಿಗಳು ಗುರು ಭಕ್ತಿ ಮೆರೆದರು.
ಶಿರಂಗಾಲ ಗ್ರಾಮದಲ್ಲಿ ಏರ್ಪಡಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ 1993ನೇ ಇಸವಿಯಿಂದ 2019ನೇ ಇಸವಿಯ ವರೆಗೂ ಪ್ರಾಂಶುಪಾಲ, ಉಪನ್ಯಾಸಕರಾಗಿ ಹಾಗೂ ಸಿಬ್ಬಂದಿಗಳಾಗಿ ಕಾರ್ಯ ನಿರ್ವಹಿಸಿದ ಗುರುಗಳಿಗೆ ವಿರಾಜಪೇಟೆ ಅರಮೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸನ್ಮಾನಿಸಿ ಗೌರವಿಸಿದರು. ಪ್ರಾಂಶುಪಾಲರಾಗಿದ್ದ ಎಂ.ಕೆ. ಕಾರ್ಯಪ್ಪ, ಕೆ.ಬಿ.ಕೆಂಪೇಗೌಡ, ಮಹೇಶಾರಾಧ್ಯ, ಬಿ.ಎಸ್. ಕುಮಾರಸ್ವಾಮಿ, ಫಾರಿದ ಬೇಗಂ, ಕೃಷ್ಣನಾಯಕ್, ಪುಟ್ಟರಾಜು, ಸುರೇಶ್ ಕುಮಾರ್, ಸಿ.ಎಂ.ಮಹಾಲಿಂಗಯ್ಯ, ಎಂ.ವಿ.ವಿಜಯ್, ಮಂಜುನಾಥ ಪ್ರಸನ್ನ, ರಾಜಮಣಿ, ಕೆ.ಯು.ಶಶಿ, ಎನ್.ವಿ.ಶಂಕರ್, ಎಚ್.ಸಿ.ಮಂಜು, ಎಂ.ಎನ್.ಮಂಜುನಾಥ್, ಜಯಮ್ಮ, ಸೋಮಶೇಖರ್, ರಾಜಣ್ಣ, ಸಿದ್ದರಾಜಪ್ಪ, ಸುಬ್ರಮಣಿ ಟಿ.ಕೆ.ಲಲಿತಾ, ಎಚ್.ಎಸ್.ಕೃಷ್ಣೇಗೌಡ ಅವರುಗಳನ್ನು ಸನ್ಮಾನಿಸಲಾಯಿತು.
ಬೆಳ್ಳಿಹಬ್ಬ ಆಚಾರಣಾ ಸಮಿತಿ ಅಧ್ಯಕ್ಷ ಎನ್.ಎಸ್.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ತೊರೆನೂರು ವಿರಕ್ತಮಠದ ಶ್ರೀ ಮಲ್ಲೇಶ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಗ್ರಾ.ಪಂ.ಮಾಜಿ ಅಧ್ಯಕ್ಷ ಎಸ್.ವಿ.ನಂಜುಂಡಪ್ಪ , ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಸ್.ಬಿ.ಮಹೇಶ್, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್.ಚಂದ್ರಶೇಖರ್, ಉಪಾಧ್ಯಕ್ಷ ಪಿ.ಸಿ.ಬೇಲಯ್ಯ, ಮಂಟಿಗಮ್ಮ ದೇವಸ್ಥಾನ ಸಮಿತಿ ಕಾರ್ಯದರ್ಶಿ ಸಿ.ಎನ್.ಲೋಕೇಶ್,ಕಸಾಪ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಮುಖಂಡರಾದ ಎಸ್.ಟಿ.ಅಶ್ವತ್ ಕುಮಾರ್, ರಾಜಪ್ಪ, ಎಸ್.ಎಸ್.ಕೃಷ್ಣ, ಧರಣೇಂದ್ರ ಕುಮಾರ್, ತಮ್ಮಯ್ಯ, ಎಸ್.ಎನ್.ಶ್ರೀಧರ್, ರಾಜು, ಕನ್ನಡ ಸಂಸ್ಕೃತಿ ಇಲಾಖೆ ಮಣಜೂರು ಮಂಜುನಾಥ್, ಸಂಸ್ಥೆ ಪ್ರಾಂಶುಪಾಲ ಹಂಡ್ರಂಗಿ ನಾಗರಾಜು, ಮುಖ್ಯ ಶಿಕ್ಷಕ ಸೋಮಯ್ಯ ಉಪಸ್ಥಿತರಿದ್ದರು. ಇದೇ ಸಂದರ್ಭ ಬೆಳ್ಳಿಹಬ್ಬ ಆಚರಣಾ ಸಮಿತಿ ಅಧ್ಯಕ್ಷ ರಮೇಶ್, ಸದಸ್ಯರಾದ ಪಿ.ಸಿ.ಬೇಲಯ್ಯ ಎನ್.ಸಿ.ಶ್ರೀಧರ್, ಎಂ.ಸಿ.ಸುರೇಶ್, ಎಸ್.ಎಸ್.ಕೃಷ್ಣ, ಎಸ್.ಕೆ.ರಾಜು, ಎಸ್.ಪಿ.ಚೇತನ್, ಎನ್.ಎ.ಜವರೇಗೌಡ, ಎಸ್.ಸಿ.ಪ್ರಕಾಶ್ ಎಸ್.ಎಲ್.ತಮ್ಮಯ್ಯ ಹಾಗೂ ಗ್ರಾ.ಪಂ.ಮಾಜಿ ಅಧ್ಯಕ್ಷ ಎಸ್.ವಿ.ನಂಜುಂಡಪ್ಪ, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ವಿಜಯ್ ಕುಮಾರ್, ಎಸ್.ಟಿ.ಅಶ್ವತ್ ಕುಮಾರ್, ಅವರನ್ನು ಸನ್ಮಾನಿಸಲಾಯಿತು.