ಕುಶಾಲನಗರ, ಜ. 21: ಕುಶಾಲನಗರ ತಮಿಳ್ ಸಂಘಂ ಆಶ್ರಯದಲ್ಲಿ 3ನೇ ವರ್ಷದ ಪೊಂಗಲ್ ಸಂಕ್ರಾಂತಿ ಹಬ್ಬದ ವಾರ್ಷಿಕೋತ್ಸವ ಇಂದು (22 ರಂದು) ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಕೋಣಮಾರಿಯಮ್ಮ ದೇವಾಲಯದಲ್ಲಿ ಬೆಳಗ್ಗೆ 9 ಗಂಟೆಗೆ ಪೊಂಗಲ್ ಕಾರ್ಯಕ್ರಮ ನಂತರ 10 ಗಂಟೆಗೆ ಎಪಿಸಿಎಂಎಸ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಎಂ.ಪಳನಿಸ್ವಾಮಿ ತಿಳಿಸಿದ್ದಾರೆ.