ಮಡಿಕೇರಿ, ಜ. 21: ಜನವರಿ ತಿಂಗಳ ಮನೆ ಮನೆ ಕಾವ್ಯಗೋಷ್ಠಿ ಬಳಗದ ಮೂರನೆಯ ಕವಿಗೋಷ್ಠಿಯು ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ಪ್ರಾಯೋಜಕತ್ವದಲ್ಲಿ ಮಡಿಕೇರಿ ನಗರದ ಹೊಸ ಬಡಾವಣೆಯ ಅಶೋಕ ಭವನದಲ್ಲಿ ನಡೆಯಿತು.
ಒಂದು ಬೆಣ್ಣೆ ಹಣ್ಣು ಹಾಗೂ ಒಂದು ಮಾವಿನ ಹಣ್ಣಿನ ಗಿಡಗಳನ್ನು ನೆಡುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಲಾಯಿತು.
ನಂತರ ಸಾಹಿತ್ಯಿಕ ವಿಚಾರ ಗಳನ್ನು ಒಳಗೊಂಡಂತೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಆ ಬಳಿಕ ಹಿರಿಯ ಕವಿ ಗಿರೀಶ್ ಕಿಗ್ಗಾಲು ರಸ ಪ್ರಶ್ನೆ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಬಳಿಕ ಸ್ಥಳದಲ್ಲಿಯೇ ವಿಷಯ ನೀಡುವ ಮೂಲಕ ಕವನ ರಚನೆಗೆ ಚಾಲನೆ ನೀಡಲಾಯಿತು.
ಕವಿಮನಸ್ಸಿನ ಭಾವನೆಗಳನ್ನು ಅತ್ಯಂತ ಶ್ರದ್ಧೆಯಿಂದ ಮುಕ್ತವಾಗಿ ತಮಗೆ ಇಷ್ಟ ಬಂದಲ್ಲಿ ಕುಳಿತು ಕಾಗದಕ್ಕೆ ಇಳಿಸಿದರು. ಮಾಲದೇವಿ ಮೂರ್ತಿ ಇವರ ಗಝಲ್, ನಳಿನಿ ಬಿಂದು ಅವರಿಂದ ಕೊಡವ ಕವಿತೆ, ಹಿರಿಯ ಕವಿಗಳಾದ ಹಾ.ತಿ. ಜಯಪ್ರಕಾಶ್ ಅವರ ಚುಟುಕು, ಶಿವದೇವಿ ಅವನಿಶ್ಚಂದ್ರ, ಗೌರಮ್ಮ ಮಾದಮ್ಮಯ್ಯ, ನಾಯಕಂಡ ಬೇಬಿ ಚಿಣ್ಣಪ್ಪ, ಕಸ್ತೂರಿ ಗೋವಿಂದಮ್ಮಯ್ಯ, ಶ್ವೇತಾ ಕೆ.ಎಂ., ಜಯಲಕ್ಷ್ಮಿ ಎಂ.ಬಿ., ಹೇಮಲತಾ ಪೂರ್ಣ ಪ್ರಕಾಶ್, ಶೋಭಾ ಸುಬ್ಬಯ್ಯ, ಸೈಮನ್ ಎಸ್, ಕಿಗ್ಗಾಲು ಜಿ. ಹರೀಶ್, ಬಿ.ಬಿ. ಕಿಶೋರ್ ಕುಮಾರ್ ತಾವೂರು, ನಾ ಕನ್ನಡಿಗ, ಚಾಮೆರ ದಿನೇಶ್, ಕಂಪ್ಲಾಪುರ ಮೋಹನ್, ಇ. ಸುಲೇಮಾನ್, ಬೈತಡ್ಕ ಜಾನಕಿ ಬೆಳ್ಯಪ್ಪ, ಕುಡೆಕಲ್ ಸಂತೋಷ್, ರಾಚು ಶ್ಯಾಮ್, ಸುದರ್ಶನ್ ಕುಸಬೂರು, ನ.ಲ. ವಿಜಯ, ವೈಲೇಶ ಪಿ.ಎಸ್., ಸತೀಶ್ ಡಿ.ಪಿ., ಮಧುಕರ್ ಹೆಬ್ಬಾಲೆ, ಕಿಗ್ಗಾಲು ಎಸ್. ಗಿರೀಶ್ರಂತಹ ಹಿರಿಯ ಕವಿಗಳು ಹಾಗೂ ಮೊದಲ ಬಾರಿಗೆ ವೇದಿಕೆ ಪಡೆದ ಬೊಟ್ಟೋಳಂಡ ನಿವ್ಯಾ ದೇವಯ್ಯ, ಶಶಿಕಲಾ ಗಿರೀಶ್ ಕಿಗ್ಗಾಲು, ಚೌರಿರ ಕಾವೇರಿ ಪೂವಯ್ಯ, ಎಂಟನೇ ತರಗತಿ ವಿದ್ಯಾರ್ಥಿ ಧನುಷ್ ಎಸ್, ನರ್ಸರಿ ವಸಂತ್, ಲೀಲಾಕುಮಾರಿ ತೊಡಿಕಾನ, ಶ್ರಾವ್ಯ ಕೆ., ಜಯಶ್ರೀ ಅನಂತ ಶಯನ ಕವಿತೆ ಬರೆದು ವಾಚಿಸಿದರು. ಶಿವಮ್ಮ ವೈಲೇಶ, ಹೆಚ್.ಎಸ್. ಶಿವಮೂರ್ತಿ, ಕುಡೆಕಲ್ ಸವಿತಾ ಸಂತೋಷ್, ಪುತ್ರ ನಿಹಾಲ್ ಇದ್ದರು.
ಹಾಡುಗಾರಿಕೆ: ಅನಂತಶಯನ ಅವರು ಹಾಡಿಗೆ ಮುನ್ನುಡಿ ಬರೆದರೆ, ಜಯಶ್ರೀ ಅನಂತಶಯನ, ನಾ ಕನ್ನಡಿಗ, ಮಾಲಾದೇವಿ ಮೂರ್ತಿ, ಶ್ರಾವ್ಯ, ಬೈತಡ್ಕ ಜಾನಕಿ, ಶೋಭಾ ಸುಬ್ಬಯ್ಯ, ನರ್ಸರಿ ವಸಂತ್ ಹಾಡು ಹಾಡಿ ರಂಜಿಸಿದರು. ನಡುನಡುವೆ ಕವಿಗಳು ಹಾಸ್ಯದ ಹೊನಲು ಹರಿಸಿದರು. ಬಳಿಕ ನೆರೆದಿದ್ದ ಎಲ್ಲರಿಗೂ ನೆನಪಿನ ಕಾಣಿಕೆಯಾಗಿ ಪ್ರಶಂಸನಾ ಪತ್ರ ನೀಡಲಾಯಿತು.