ಕುಶಾಲನಗರ, ಜ.21 : ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ 2019-20ರ ಸಾಲಿನ ಅಧ್ಯಕ್ಷರಾಗಿ ರಘುಹೆಬ್ಬಾಲೆ ಆಯ್ಕೆಯಾಗಿದ್ದಾರೆ.

ಸ್ಥಳೀಯ ಅಯ್ಯಪ್ಪಸ್ವಾಮಿ ರಸ್ತೆಯಲ್ಲಿರುವ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಸಬಲಂ ಬೋಜಣ್ಣರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಉಪಾಧ್ಯಕ್ಷರಾಗಿ ಕೆ.ಕೆ.ನಾಗರಾಜಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಸ್. ಲೋಕೇಶ್ ಸಾಗರ್, ಖಜಾಂಚಿಯಾಗಿ ಅಶ್ವತ್ ಕುಮಾರ್, ಸಹ ಕಾರ್ಯದರ್ಶಿಯಾಗಿ ವಿನೋದ್, ಕಾರ್ಯಕ್ರಮ ಸಂಯೋಜಕರಾಗಿ ಕೆ.ಎಸ್.ಮೂರ್ತಿ, ಅಂತರಿಕ ಲೆಕ್ಕಪರಿಶೋಧಕರಾಗಿ ಸುನೀಲ್, ಗೌರವಾಧ್ಯಕ್ಷರಾಗಿ ಎಂ.ಎನ್.ಚಂದ್ರಮೋಹನ್, ಸಬಲಂ ಬೋಜಣ್ಣರೆಡ್ಡಿ ಹಾಗೂ ನಿರ್ದೇಶಕರಾಗಿ ಕುಡೆಕಲ್ ಗಣೇಶ್, ವನಿತಾ ಚಂದ್ರಮೋಹನ್, ಜಗದೀಶ್, ಎ.ಜಿ.ಮಹೇಶ್ ಆಯ್ಕೆಯಾಗಿದ್ದಾರೆ.