ನಾಪೆÇೀಕ್ಲು, ಜ. 21 : ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ದರ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಾಧ್ಯ ಎಂದು ಮೂರ್ನಾಡು ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ.ದೇವಕಿ ಅಭಿಪ್ರಾಯಪಟ್ಟರು. ಸ್ಥಳೀಯ ಶ್ರೀ ರಾಮಟ್ರಸ್ಟ್ ಆಂಗ್ಲಮಾಧ್ಯಮ ಶಾಲೆಯಲ್ಲಿ ನಿವೃತ್ತ ಶಿಕ್ಷಕ ದಿ. ಮಕ್ಕಿ ಎಸ್.ಸುಬ್ರಾಯ ಸ್ಮರಣಾರ್ಥ ಅವರ ಪುತ್ರ ನಿವೃತ್ತ ಶಿಕ್ಷಕ ಮಕ್ಕಿ ಎಸ್.ಸುಬ್ರಮಣ್ಯ ಅವರ ಪ್ರಾಯೋಜಕತ್ವದಲ್ಲಿ ನಡೆದ ತಾಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದಷ್ಟೇ ಪ್ರಾಮುಖ್ಯತೆಯನ್ನು ಸಾಮಾನ್ಯ ಜ್ಞಾನಕ್ಕೂ ನೀಡಬೇಕು. ಇದರಿಂದ ಮಾತ್ರ ಪೂರ್ಣ ಪ್ರಮಾಣದ ಅಂಕಗಳಿಸಲು ಸಾಧ್ಯ ಎಂದರು.
ಈಗಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನ, ಸಾಮಾನ್ಯ ಇಂಗ್ಲಿಷ್ ಹಾಗೂ ಗಣಿತ ವಿಷಯಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಈಗಿನಿಂದಲೇ ತೊಡಗಿಸಿಕೊಳ್ಳಬೇಕು. ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಮನೆಯಲ್ಲಿ ಪುಸ್ತಕ ಭಂಡಾರವನ್ನು ಸ್ಥಾಪಿಸಿಕೊಂಡು ಹೆಚ್ಚಿನ ಸಮಯವನ್ನು ಓದುವದಕ್ಕೆ ಬಳಸಿದರೆ ಉತ್ತಮ ಹವ್ಯಾಸ ವೃದ್ಧಿಸಿದಂತಾಗುತ್ತದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮಟ್ರಸ್ಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಬೊಪ್ಪಂಡ ಜಾಲಿ ಬೋಪಯ್ಯ ವಹಿಸಿದ್ದರು.ವೇದಿಕೆಯಲ್ಲಿ ಪ್ರಾಂಶುಪಾಲೆ ಬಿ.ಎಂ.ಶಾರದ, ನಿರ್ದೇಶಕರಾದ ಹ್ಯಾರಿ ಮಂದಣ್ಣ, ಕಲ್ಯಾಟಂಡ ಪೂಣಚ್ಚ, ಬಿದ್ದಾಟಂಡ ಪಾಪ ಮುದ್ದಯ್ಯ, ಅರೆಯಡ ಸೋಮಪ್ಪ, ಸುನಿಲ್, ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ವಿನಯ್ ಇದ್ದರು. ಯಾನ ಮತ್ತು ತಂಡದಿಂದ ಪ್ರಾರ್ಥನೆ, ಪ್ರಾಂಶುಪಾಲೆ ಬಿ.ಎಂ.ಶಾರದ ಸ್ವಾಗತ, ಶಿಕ್ಷಕಿ ಸ್ಮಿತಾ ಮುಖ್ಯ ಅತಿಥಿಗಳ ಪರಿಚಯ, ಶಿಕ್ಷಕಿ ಡಿಂಪಲ್ ನಿರೂಪಿಸಿ, ಶಿಕ್ಷಕ ಕಾಳಯ್ಯ ವಂದಿಸಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಚೇರಂಬಾಣೆಯ ರಾಜರಾಜೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ದ್ವಿತೀಯ, ನಾಪೆÇೀಕ್ಲು ಅಂಕುರ್ ಪಬ್ಲಿಕ್ ಶಾಲೆ ತೃತೀಯ, ಶ್ರೀ ರಾಮಟ್ರಸ್ಟ್ ವಿದ್ಯಾಸಂಸ್ಥೆ ನಾಲ್ಕನೇ ಸ್ಥಾನ ಹಾಗೂ ಮೂರ್ನಾಡು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಐದನೇ ಸ್ಥಾನ ಪಡೆದರು.
11 ಸುತ್ತುಗಳಲ್ಲಿ ಆಯೋಜಿಸಲಾಗಿದ್ದ ಅಂತಿಮ ಸುತ್ತಿನ ರಸಪ್ರಶ್ನೆ ಸ್ಪರ್ಧೆಯಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಆರ್ಯನ್ ಅಪ್ಪಚ್ಚು ಬಿ.ಎನ್. ಕೀರ್ತನ್ ಬಿ.ಜೆ, ಅಭಿಜ್ಞಾನ್ ಬಿ.ಸಿ. ಹಾಗೂ ಕಾರ್ತಿಕ್ ಕೆ.ಪಿ. ತಂಡ 89 ಅಂಕ ಗಳಿಸಿ ವಿಜೇತರಾದರು. ಪ್ರಬಲ ಪೈಪೆÇೀಟಿ ನೀಡಿದ ಚೇರಂಬಾಣೆಯ ರಾಜರಾಜೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕೆ. ಎಸ್. ಸೋಮಯ್ಯ, ದಿಶಾಸುವರ್ಣ, ಶ್ರೀವತ್ಸ ಎಂ.ಎಸ್. ಮತ್ತು ಬಿದ್ದಪ್ಪ ಕೆ. ಟಿ. ತಂಡ 76 ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದುಕೊಂಡರು. ರಸಪ್ರಶ್ನೆ ನಿರ್ವಾಹಕರಾಗಿ ಶಿಕ್ಷಣ ಸಂಯೋಜಕ ಪಿ.ಆರ್.ಅಯ್ಯಪ್ಪ, ನೇತಾಜಿ ಪ್ರೌಢಶಾಲೆಯ ಗಣಿತ ಶಿಕ್ಷಕ ಸಿ.ಎಸ್.ಸುರೇಶ್ ಕಾರ್ಯನಿರ್ವಹಿಸಿದರು.