ಕೂಡಿಗೆ, ಜ. 20: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯದ ತೊರೆನೂರು ಶ್ರೀ ಬಸವೇಶ್ವರ ಸಮುದಾಯ ಭವನಕ್ಕೆ ವಲಯದ ಮೇಲ್ವಿಚಾರಕ ವಿನೋದ್ ಕುಮಾರ್ ಅಧ್ಯಕ್ಷ ಜಗದೀಶ್ ಟಿ.ಬಿ. ಕಾರ್ಯದರ್ಶಿ ಶಂಕರಮೂರ್ತಿಯವರಿಗೆ ವಿತರಣೆ ಮಾಡಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಬಾಗದಿಂದ ಬಸವೇಶ್ವರ ಸಮುದಾಯ ಭವನಕ್ಕೆ ರೂ. 75000 ಸಾವಿರ ಮಂಜೂರಾಗಿದ್ದು, ಮೊದಲ ಕಂತು ರೂ. 45000 ಸಾವಿರ ದ್ವಿತೀಯ ಕಂತು ರೂ. 30000 ವಿತರಣೆ ಮಾಡಲಾಗಿದೆ. ಕ್ಷೇತ್ರದಿಂದ ಅನುದಾನವನ್ನು ಒಳ್ಳೆಯ ರೀತಿ ಉಪಯೋಗ ಮಾಡಿಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭ ಗ್ರಾಮದ ಸೇವಾ ಪ್ರತಿನಿಧಿ ನಾಗವೇಣಿ ಸಮುದಾಯ ಭವನದ ಪದಾಧಿಕಾರಿಗಳು ಹಾಜರಿದ್ದರು.