ಗೋಣಿಕೊಪ್ಪಲು, ಜ. 20: ದಿ ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗೋಣಿ ಕೊಪ್ಪಲು ಹಾಗೂ ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಇವರ ಜಂಟಿ ಆಶ್ರಯದಲ್ಲಿ ತಾ. 22 ರಂದು ಬೆಳಿಗ್ಗೆ 10 ಗಂಟೆಗೆ ಗೋಣಿಕೊಪ್ಪಲುವಿನ ಹರಿಶ್ಚಂದ್ರಪುರದಲ್ಲಿರುವ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಭವನದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕಿರಿಯಮಾಡ ಯು. ಅರುಣ್ ಪೂಣಚ್ಚ ಅಧ್ಯಕ್ಷತೆಯಲ್ಲಿ ಸಂತ್ರಸ್ತರಿಗೆ ನೆರೆ ಪರಿಹಾರ ವಿತರಣಾ ಕಾರ್ಯ ಕ್ರಮವನ್ನು ನಡೆಸಲಾಗುವದು.

ಕಾರ್ಯಕ್ರಮದಲ್ಲಿ ನೆರೆ ಹಾವಳಿ ಸಂದರ್ಭ ಶ್ರಮಿಸಿದ ರೊಟೇರಿಯನ್ ಹಾಗೂ ವಕೀಲ ಕಿರಿಯಮಾಡ ರತನ್ ತಮ್ಮಯ್ಯರವರನ್ನು ಸನ್ಮಾನಿಸಿ ಗೌರವಿಸಲಾಗುವದು ಮುಖ್ಯ ಅತಿಥಿಗಳಾಗಿ ಕಾಪ್ಸ್ ವಿದ್ಯಾಸಂಸ್ಥೆಯ ನಿವೃತ್ತ ಪ್ರಿನ್ಸಿಪಾಲ್ ಪ್ರೊ. ಎಂ. ನಂಜುಂಡ ಆಗಮಿಸಲಿದ್ದಾರೆ.

12 ಮಂದಿ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸಲಾಗುವದು ಎಂದು ಬ್ಯಾಂಕಿನ ಕಾರ್ಯ ನಿರ್ವಾಹಣಾಧಿಕಾರಿ ತಿಳಿಸಿದ್ದಾರೆ.