ಸಿದ್ದಾಪುರ, ಜ. 20: ಗೋಣಿಕೊಪ್ಪಲುವಿನಲ್ಲಿ ನೂತನವಾಗಿ ಜಾರಿಗೆ ತಂದಿರುವ ಏಕಮುಖ ಸಂಚಾರಕ್ಕೆ ಪಾಲಿಬೆಟ್ಟ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿಯ ಅದ್ಯಕ್ಷ ಎಂ.ಎಂ ಸಾಬು ಕಾಳಪ್ಪ ಬೆಂಬಲ ವ್ಯಕ್ತ ಪಡಿಸಿದ್ದಾರೆ.

ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ವಾಹನಗಳ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯು ಏಕಮುಖ ಸಂಚಾರವನ್ನು ಕೈಗೊಂಡಿರುವ ಕ್ರಮವು ಸರಿಯಾಗಿದೆ. ಈ ಹಿನೆÀ್ನಲೆಯಲ್ಲಿ ಪಾಲಿಬೆಟ್ಟ ಚೇಂಬರ್ ಆಫ್ ಕಾಮರ್ಸ್ ಬೆಂಬಲ ಸೂಚಿಸಿದೆ ಎಂದರು.