ಸುಂಟಿಕೊಪ್ಪ, ಜ. 20: ಪ್ರತಿಯೊಂದು ಮಗುವಿನಲ್ಲೂ ದಿವ್ಯ ಚೇತನವಿದೆ. ಮಕ್ಕಳ ಅಭಿರುಚಿಗೆ ತಕ್ಕಂತೆ ಕಲಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರ ಕನಸ್ಸನ್ನು ಸಾಕಾರಗೊಳಿಸಲು ಪ್ರೇರಕ ಶಕ್ತಿಯಾಗಬೇಕೆಂದು ಟಾಟಾ ಕಾಫಿ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಎಂ.ಬಿ. ಗಣಪತಿ ಕರೆ ನೀಡಿದರು. ಅಮೇರಿಕದ ಯುನೆಸ್ ಕೆನಡಿ ಶ್ರಿವರ್‍ರವರ 10ನೇ ವರ್ಷದ ದಿನಾಚರಣೆಯ ಅಂಗವಾಗಿ ಸ್ವಸ್ಥ ಪುನರ್ವಸತಿ ಕೇಂದ್ರದ ಸಾಮಾನ್ಯ ಮಕ್ಕಳಿಗೂ ಮತ್ತು ವಿಕಲ ಚೇತನ ಮಕ್ಕಳಿಗೂ ಸಮನ್ವಯ ಕ್ರೀಡಾಕೂಟ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಸ್ಥ ಸಂಸ್ಥೆಯೂ ವಿಶೇಷಚೇತನರಿಗೆ ಶ್ರಮಿಸುವ ಕೆಲಸವನ್ನು ಶ್ಲಾಘಿಸಿದರು. ವಿಶೇಷ ಮಕ್ಕಳನ್ನು ಸಾಮಾನ್ಯ ಮಕ್ಕಳಂತೆ ಕಾಣಬೇಕು, ಸಾಮಾನ್ಯ ಮಕ್ಕಳಿಗಿಂತ ವಿಶೇಷಚೇತನ ಮಕ್ಕಳಲ್ಲಿ ಹೆಚ್ಚಿನ ಸಾಮಥ್ರ್ಯವಿದೆ ಅದನ್ನು ಹೊರಹೊಮ್ಮಿಸುವ ಕಾರ್ಯ ಸ್ವಸ್ಥ ಸಂಸ್ಥೆ ಮಾಡುತ್ತಿರುವದು ಶ್ಲಾಘನೀಯ ಎಂದರು. ಈಗಿನ ಕೆಲವು ಶಾಲೆಗಳಲ್ಲಿ ಆಟದ ಮೈದಾನದ ಕೊರತೆÉ ಮತೊಂದೆಡೆ ಮಕ್ಕಳು ಮೊಬೈಲ್‍ನಲ್ಲಿ ಆಟವಾಡುವ ಅಭ್ಯಾಸ ಅತಿಯಾಗಿರುದು ವಿಪರ್ಯಾಸ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ವಸ್ಥ ಪುನರ್ವಸತಿ ಕೇಂದ್ರದ ಮಾಜಿ ನಿರ್ದೇಶಕಿ ಗಂಗಾ ಚಂಗಪ್ಪ ಮಾತನಾಡಿ, ವಿಶೇಷ ಮಕ್ಕಳನ್ನು ಗೌರವದಿಂದ ಕಾಣಬೇಕು ಜೊತೆಗೆ ಇಂತಹವರಿಗೆ ಇನ್ನೂ ಹೆಚ್ಚು ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಬೇಕು ಎಂದರು.

ನಿರ್ದೇಶಕಿ ಆರತಿ ಸೋಮಯ್ಯ ಮಾತನಾಡಿದರು. ಶಾಂತಿನಿಕೇತನ ಪ್ರೌಢಶಾಲಾ ಶಿಕ್ಷಕ ಸುನಿಲ್ ವಿವೇಕ್, ಸ್ವಸ್ಥ ಶಾಲೆಯ ಶಿಕ್ಷಕ ಬಿಜು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರೇಖಾ ಪ್ರಾರ್ಥಿಸಿ, ಸ್ವಸ್ಥ ಶಾಲೆಯ ಶಿಕ್ಷಕಿ ಮಂಜುಳ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ನಿರೂಪಿಸಿದರು, ಶಿಕ್ಷಕಿ ಶ್ವೇತ ವಂದಿಸಿದರು.

ಕ್ರೀಡಾ ಸ್ಪರ್ಧೆಯಲ್ಲಿ ಸುಂಟಿಕೊಪ್ಪ ಸಮೀಪದ ಕೊಡಗರ ಹಳ್ಳಿ ಶಾಂತಿನಿ ಕೇತನ ಪ್ರೌಢಶಾಲಾ ಸಾಮಾನ್ಯ ವಿದ್ಯಾರ್ಥಿಗಳು ಹಾಗೂ ಸ್ವಸ್ಥ ಶಾಲೆಯ ವಿಶೇಷ ಮಕ್ಕಳು ಭಾಗವಹಿಸಿದ್ದರು.