ಶನಿವಾರಸಂತೆ, ಜ. 20: ಗುರುವಾರದಂದು ನಡೆದ ಅವರೆದಾಳು ಜಾತ್ರಾ ಬನದಲ್ಲಿ ನಡೆದ ಶ್ರೀ ಕುಮಾರಲಿಂಗೇಶ್ವರ ಜಾತ್ರೆಯ ಅಧ್ಯಕ್ಷತೆಯನ್ನು ಸೇವಾ ಸಮಿತಿಯ ಅಧ್ಯಕ್ಷ ವೇದಮೂರ್ತಿ ವಹಿಸಿದ್ದರು.
400 ವರ್ಷಗಳ ಇತಿಹಾಸ ಪ್ರಸಿದ್ಧ ಜಾತ್ರೆಗೆ ಸಂಬಂಧಪಟ್ಟಂತೆ ಹುಲುಕೋಡು ಗ್ರಾಮ ದೇವಸ್ಥಾನದಲ್ಲಿ 3 ದಿನಗಳಿಂದ ಸುಗ್ಗಿ ನಡೆಯುತ್ತದೆ. ಕಳೆದ 10 ವರ್ಷಗಳಿಂದ ಜಾತ್ರೆಗೆ ಬರುವ ಎಲ್ಲಾ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮತ್ತು ಪ್ರಸಾದ ವಿನಿಯೋಗ ನಡೆಯುತ್ತಿದೆ. ಈ ಜಾತ್ರೆಗೆ 52 ಗ್ರಾಮದ ಜನ ಪಾಲ್ಗೊಳ್ಳುತ್ತಾರೆ ಈ ಪ್ರಸಿದ್ಧ ಜಾತ್ರೆಗೆ ಸರಕಾರದಿಂದ ಜಾತ್ರಾ ಬನದ ಅಭಿವೃದ್ಧಿಗೆ ಧನ ಸಹಾಯ ನೀಡಬೇಕೆಂದು ಕೋರಿಕೊಂಡರು.
ಸಭೆಯಲ್ಲಿ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಡಿ.ಪಿ. ಬೋಜಪ್ಪ, ಜಿಲ್ಲಾ ವಕ್ತಾರ ಆದಿಲ್ ಪಾಶ, ಪ್ರಮುಖರಾದ ಕೆ.ಎಂ. ಮೋಹನ್, ರಮೇಶ್, ನಾಗಣ್ಣ, ಶಿವಪ್ಪ, ಚಿದಾನಂದ, ಪ್ರವಿಣ್, ಹರೀಶ್ ಹಾಗೂ ಪೊಲೀಸ್ ಪ್ರಬಾರ ಠಾಣಾಧಿಕಾರಿ ಚೆಲುವರಾಜ್ ಉಪಸ್ಥಿತರಿದ್ದರು.