ಸೋಮವಾರಪೇಟೆ,ಜ.20: ರಥ ಸಪ್ತಮಿ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವತಿಯಿಂದ ಇಲ್ಲಿನ ಹೋಮಿಯೋಪಥಿಕ್ ಕಟ್ಟಡದಲ್ಲಿ ತಾ. 22ರಿಂದ ಪ್ರತಿದಿನ ಬೆಳಿಗ್ಗೆ 5.30 ರಿಂದ 6.30ರವರೆಗೆ ಉಚಿತ ಸೂರ್ಯ ನಮಸ್ಕಾರ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಶಿಕ್ಷಕಿ ರಾಗಿಣಿ ತಿಳಿಸಿದ್ದಾರೆ.
ಆರ್ಟ್ ಆಫ್ ಲಿವಿಂಗ್ನಿಂದ ಫೆ. 12ರಂದು ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ತಾಲೂಕಿನ ಹೊನ್ನಮ್ಮನ ಕೆರೆ ದಡದಲ್ಲಿ ರಥಸಪ್ತಮಿ ಕಾರ್ಯಕ್ರಮದ ಅಂಗವಾಗಿ 108 ಸೂರ್ಯನಮಸ್ಕಾರ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಉಚಿತ ತರಬೇತಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.