ಶನಿವಾರಸಂತೆ, ಜ. 19: ಶನಿವಾರಸಂತೆಗೆ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಶನಿವಾರ ಭೇಟಿ ನೀಡಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರವು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಯಾವದೇ ಅಡ್ಡಿ- ಆತಂಕಗಳಿಲ್ಲದೆ 5 ವರ್ಷ ಪೂರೈಸಲಿದ್ದು, ಬಿಜೆಪಿ ಪಕ್ಷದವರಿಗೆ ಸ್ವಾಭಿಮಾನವಿದ್ದರೆ ವಿರೋಧಿ ಪಕ್ಷವಾಗಿ ಕಾರ್ಯನಿರ್ವಹಿಸಬೇಕೇ ಹೊರತು ರಾಜ್ಯದ ಜನತೆಗೆ ತಪ್ಪು ಮಾಹಿತಿ, ಸುಳ್ಳು ಸುದ್ದಿಯನ್ನು ಹರಡಬಾರದು ಎಂದು ಹೇಳಿದರು.

ಈ ಸಂದರ್ಭ ಜೆಡಿಎಸ್ ಹೋಬಳಿ ಅಧ್ಯಕ್ಷ ಎಂ.ಎಮ. ಆದಿಲ್ ಪಾಶಾ, ಜೆ.ಡಿ.ಎಸ್. ಜಿಲ್ಲಾ ಉಪಾಧ್ಯಕ್ಷ

ಡಿ.ಪಿ. ಬೋಜಪ್ಪ, ಕ್ಷೇತ್ರ ಪ್ರಚಾರ ಸಮಿತಿಯ ಅಧ್ಯಕ್ಷ ಕೆ.ಎಸ್. ಚನ್ನಬಸಪ್ಪ, ಯಸಳೂರು ಹೋಬಳಿ ಅಧ್ಯಕ್ಷ ಗುರುರಾಜ್, ಪ್ರಮುಖರಾದ ಜಂತ್ತೆಳ್ಳಿ ಪುಟ್ಟಸ್ವಾಮಿ, ಚಂದ್ರಕಾಂತ್, ಸಂತೋಷ್, ರಾಂಪುರದ ಕಾಂತರಾಜ್, ಈರೇಗೌಡ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.