ಮಡಿಕೇರಿ: ಕಾನ್‍ಬೈಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷೆ ಸುನಿತಾ ಅವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುಂಟಿಕೊಪ್ಪ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಾನ್ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಶಾಲೆಯ ಸಾಧನೆಗಳು ಉತ್ತಮವಾಗಿದ್ದು, ವಿದ್ಯಾಭ್ಯಾಸವನ್ನು ಮುಂದುವರಿಸಿ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಮತ್ತೊಬ್ಬ ಅತಿಥಿಗಳಾದ ಸುಂಟಿಕೊಪ್ಪ ಪೆÇಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಸಾ.ರಾ. ಜಯರಾಮ್ ಮಾತನಾಡಿ, ಪ್ರೌಢ ಹಂತದಲ್ಲಿ ನಾವು ಕಲಿತ ಶಿಸ್ತು ಸಂಯಮ ಮತ್ತು ಕಲಿಕೆ ಮುಂದಿನ ಹಂತವನ್ನು ರೂಪಿಸುತ್ತದೆ ಎಂದರು. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಂಕರ ನಾರಾಯಣ್ ಅವರು ಕಳೆದ ಸಾಲಿನಲ್ಲಿ 500 ಕ್ಕಿಂತ ಹೆಚ್ಚು ಅಂಕ ಪಡೆದ 5 ವಿದ್ಯಾರ್ಥಿಗಳಿಗೆ ತಲಾ ರೂ. 1000 ನಗದು ಬಹುಮಾನ ವಿತರಿಸಿದರು. ಇತರ ದಾನಿಗಳು ಮತ್ತು ಕಳೆದ ಸಾಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು. ಈ ವರ್ಷದ ಶಾಲಾ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಕಾನ್‍ಬೈಲ್‍ನ ಪ್ರಿನ್ಸ್ ಚಂಗಪ್ಪ ಅವರು ಬಹುಮಾನಗಳನ್ನು ಪ್ರಾಯೋಜಿಸಿದ್ದರು.
ಸಮಾರಂಭದಲ್ಲಿ ಮಕ್ಕಳಿಂದ ದೈಹಿಕ ಕವಾಯತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಮಾರಂಭದಲ್ಲಿ ಹಿರಿಯರಾದ ನೀಲಮ್ಮ ಪೆಮ್ಮಯ್ಯ, ರಘು ಚೋಮಣಿ, ಕೃಷ್ಣಭಟ್,ವಿಜಯಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ್, ತಾಲೂಕು ಪಂಚಾಯಿತಿ ಸದಸ್ಯ ಮಣಿ, ಮುಖ್ಯ ಶಿಕ್ಷಕರು, ಶಿಕ್ಷಕರು, ಪೆÇೀಷಕ ವರ್ಗದವರು ಮತ್ತು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಳೆದ ಸಾಲಿನ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಪ್ರೇಮ ಮತ್ತು ಶಂಕರ ನಾರಾಯಣ ಅವರನ್ನು ಸನ್ಮಾನಿಸಲಾಯಿತು.
ಕುಶಾಲನಗರ: ಪರೀಕ್ಷೆಯ ಬಗ್ಗೆ ಯಾವದೇ ಆತಂಕಪಡದೆ ನಿರಾಳವಾಗಿ ಪರೀಕ್ಷೆ ಎದುರಿಸುವ ಬಗ್ಗೆ ವಿದ್ಯಾರ್ಥಿಗಳು ಚಿಂತನೆ ಹೊಂದಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್. ನಾಗರಾಜಯ್ಯ ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಸ್ಥಳೀಯ ಫಾತಿಮಾ ಕಾನ್ವೆಂಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣಾ ಮತ್ತು ಪ್ರೇರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉನ್ನತ ವ್ಯಾಸಂಗದ ಹೆಬ್ಬಾಗಿಲು 10ನೇ ತರಗತಿಯಾಗಿದ್ದು, ಈ ಹಂತವನ್ನು ಯಶಸ್ವಿಯಾಗಿ ದಾಟಿದರೆ ಹಲವು ರೀತಿಯ ಉನ್ನತ ಶಿಕ್ಷಣಗಳ ಆಯ್ಕೆ ಅವಕಾಶ ವಿದ್ಯಾರ್ಥಿಗಳಿಗೆ ದೊರಕುತ್ತದೆ. ಪರೀಕ್ಷೆ ಎಂದರೆ ಸಹಜವಾಗಿಯೇ ವಿದ್ಯಾರ್ಥಿಗಳಿಗೆ ಅವ್ಯಕ್ತ ಭಯ, ಆತಂಕ, ಸಂದೇಹಗಳಿರುತ್ತವೆ. ವಿದ್ಯಾರ್ಥಿಗಳನ್ನು ಸದಾ ಕ್ರಿಯಾಶೀಲರಾಗಿರಲು ಪ್ರೇರೇಪಿಸುವ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳು ಸದಾ ಸಿದ್ದರಿರಬೇಕಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಮೂಡಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಮುಖ್ಯಸ್ಥ ಯುವರಾಜ್ ಜೈನ್, ಉಪನ್ಯಾಸಕ ವಿಕ್ರಂ ನಾಯಕ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ಉಪನ್ಯಾಸ ನೀಡಿದರು.
ಸ್ಥಳೀಯ ಫಾತಿಮ ಪ್ರೌಢಶಾಲೆ, ಬಾಲಕಿಯರ ಪ್ರೌಢಶಾಲೆ, ಸರಕಾರಿ ಪ್ರೌಢಶಾಲೆ, ಫಾತಿಮಾ ಕಾನ್ವೆಂಟ್‍ನ 300 ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಇಸಿಓ ರಾಧಾಕೃಷ್ಣ, ವಿವಿಧ ಶಾಲೆಗಳ ಶಿಕ್ಷಕರುಗಳಾದ ಶಿವಣ್ಣ, ಫ್ರಾನ್ಸಿಸ್, ಜಾಯ್ಸಿ, ಸಂತೋಷ್, ಉಷಾ, ಕಾರ್ಯಕ್ರಮ ಸಂಯೋಜಕ ಪ್ರಕಾಶ್ ಇದ್ದರು.
ಗೋಣಿಕೊಪ್ಪಲು: ವಿದ್ಯಾರ್ಥಿಗಳು ಮಾರ್ಚ್ ತಿಂಗಳಲ್ಲಿ ನಡೆಯುವ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಬೇಕೆಂದು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ಹೇಳಿದರು.
ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿರುವ ಕ್ರೀಡಾ ವಸತಿ ಶಾಲೆಯಲ್ಲಿ ಆಯೋಜನೆ ಗೊಂಡಿದ್ದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಹಾಗೂ ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಿರಣ್‍ಕಾರ್ಯಪ್ಪ, ಇಲ್ಲಿಯ ತನಕ ವಸತಿ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿರುವದು ಖುಷಿ ತಂದಿದೆ. ಮುಂದೆ ಉತ್ತಮ ಭವಿಷ್ಯ ರೂಪಿಸಿ ಕೊಳ್ಳಲು ವಿದ್ಯಾರ್ಥಿಗಳು ಇರುವ ಸಮಯವನ್ನು ವ್ಯರ್ಥ ಮಾಡದೇ ಓದಿನಲ್ಲಿ ಕಳೆಯಬೇಕು ಎಂದರು.
ವಿದ್ಯಾರ್ಥಿಗಳಿಗೆ ಹೊಸ ಹಾಕಿ ಸ್ಟಿಕ್, ಕಂಬಳಿ ಇನ್ನಿತರ ವಸ್ತುಗಳನ್ನು ವಿತರಿಸಲಾಯಿತು. ಸಭೆಯಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಚಲನ್, ತರಬೇತುದಾರರಾದ ಬುಟ್ಟಿಯಂಡ ಚಂಗಪ್ಪ, ಕುಪ್ಪಂಡ ಸುಬ್ಬಯ್ಯ, ಮೇಲ್ವಿಚಾರಕ ಬಿ.ಎಲ್. ಮಂಜುನಾಥ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.ವೀರಾಜಪೇಟೆ: ವೀರಾಜಪೇಟೆ ತಾಲೂಕಿನ ಮೈತಾಡಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ 20 ವಿದ್ಯಾರ್ಥಿಗಳಿಗೆ ಮೈತಾಡಿ ಗ್ರಾಮದ ದಾಸಪ್ಪ ಅವರ ಪುತ್ರ ಡಿ. ರಮೇಶ್ ಬೆಂಗಳೂರಿನ ಉದ್ಯಮಿ ಇವರು ಉಚಿತವಾಗಿ ಬ್ಯಾಗ್‍ನ್ನು ಮತ್ತು ಶಾಲೆಗೆ ಅನ್ನದಾಸೋಹಕ್ಕೆ 10 ಲೀಟರ್ ಮತ್ತು 5 ಲೀಟರ್ ಕುಕ್ಕರ್‍ಗಳನ್ನು ನೀಡಿದರು.
ಇದೇ ವೇಳೆ ಶಾಲಾ ಪ್ರಬಾರ ಮುಖ್ಯ ಶಿಕ್ಷಕಿ ಫ್ಲೋರಿನ ಮೆನೆಜಸ್ ಮತ್ತು ಸಹ ಶಿಕ್ಷಕಿ ಎಂ.ಟಿ. ಭಾಗ್ಯ ದಾನಿಗಳಾದ ದಾಸಪ್ಪ, ಕದನೂರ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಣಿ, ಗ್ರಾಮಸ್ಥರಾದ ಕುಂಞರ ಸುನು ಸುಬ್ಬಯ್ಯ, ಐಯಮಂಡ ವೇಣು ಮತ್ತು ವಿ.ಸಿ. ಮನು ಹಾಜರಿದ್ದರು.
ಸುಂಟಿಕೊಪ್ಪ: ಆತ್ಮವಿಶ್ವಾಸದೊಂದಿಗೆ ವಿದ್ಯಾರ್ಥಿಗಳು ನಿರಂತರ ಕಠಿಣ ಪರಿಶ್ರಮವನ್ನು ನೀಡಿ ಕಲಿಕೆ ಕೈಗೊಂಡರೆ ಉತ್ತಮ ಫÀಲಿತಾಂಶ ಗಳಿಸಲು ಸಾಧ್ಯ ಎಂದು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್. ನಾಗರಾಜಯ್ಯ ಹೇಳಿದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಇಲ್ಲಿನ ಸಂತಮೇರಿ ಶಾಲೆಯ ಸಭಾಂಗಣದಲ್ಲಿ ಸುಂಟಿಕೊಪ್ಪ ಕ್ಲಸ್ಟರ್ ವ್ಯಾಪ್ತಿಯ ಪ್ರೌಢಶಾಲೆಗಳ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆ ಹಾಗೂ ಪ್ರೇರಣಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದÀರು. ಕಾರ್ಯಕ್ರಮ ಉದ್ಘಾಟಿಸಿದ ಸಂತಮೇರಿ ಶಾಲೆಯ ಮುಖ್ಯ ಶಿಕ್ಷಕ ಆರ್. ಸೆಲ್ವರಾಜ್ ಮಾತನಾಡಿ, ಇಂತಹ ತರಬೇತಿಗಳು ಪರೀಕ್ಷÉಯನ್ನು ಎದುರಿಸಲು ಸಹಕಾರಿಯಾಗಳಿದೆ ಎಂದರು.
ವಿದ್ಯಾರ್ಥಿಗಳಿಗೆ ಪರೀಕ್ಷÉ ಎದುರಿಸುವ ಕುರಿತು ಮಾಹಿತಿ ನೀಡಿದ ಸಂಪನ್ಮೂಲ ವ್ಯಕ್ತಿ ಮೂಡಬಿದಿರೆ ಎಕ್ಷಲೆಂಟ್ ವಿದ್ಯಾಸಂಸ್ಥೆಯ ಸಂಯೋಜಕ ಯುವರಾಜ್ ಜೈನ್ ವಿದ್ಯಾರ್ಥಿಗಳು ಪರೀಕ್ಷೆ ಬಗ್ಗೆ ಯಾವದೇ ಭಯ ಹೊಂದದೆ ಹಬ್ಬದ ಮಾದರಿಯಲ್ಲಿ ಪರೀಕ್ಷಾ ಹಬ್ಬವನ್ನು ಆಚರಿಸಬೇಕು ಎಂದರು. ಎಕ್ಷಲೆಂಟ್ ವಿದ್ಯಾಸಂಸ್ಥೆಯ ಉಪನ್ಯಾಸಕ ವಿಕ್ರಮ್ ನಾಯಕ್ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮÀಶೇಖರ್, ಎಂ.ಕೆ. ಅಸ್ಮತ್, ಶಿಕ್ಷಣ ಸಂಯೋಜಕ ಒ.ಕೆ. ರಾಧಕೃಷ್ಣ, ಪ್ರಕಾಶ್, ಶಿಕ್ಷಕ ಟಿ.ಜಿ. ಪ್ರೇಮ್‍ಕುಮಾರ್, ಕೊಡ್ಲಿಪೇಟೆಯ ದಾನಿಗಳಾದ ಲತಾ ಪೈ, ಅಡ್ಮನಿ ಇತರರು ಇದ್ದರು. ವಿದ್ಯಾರ್ಥಿಗಳಿಗೆ ಪರೀಕ್ಷÉ ತಯಾರಿ ಕುರಿತು ಸಂವಾದ ನಡೆಸಿದರು.
ಮೂರ್ನಾಡು: ಪದವಿ ಕಾಲೇಜಿನಲ್ಲಿ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತಿ ಮೊಣ್ಣಂಡ ಶೋಭ ಸುಬ್ಬಯ್ಯ, ಮಾಲತಿ ದೇವಯ್ಯ ಅವರು ಉಪನ್ಯಾಸ ತರಬೇತಿಯನ್ನು ನಡೆಸಿಕೊಟ್ಟರು.
“ಆಧುನಿಕ ಜಗತ್ತಿನಲ್ಲಿ ಕನ್ನಡದ ಸ್ಥಾನಮಾನ” ಎಂಬ ಬಗ್ಗೆ ಮಾತನಾಡಿದ ಅವರು, ಜಗತ್ತು ಎಷ್ಟೇ ಮುಂದುವರೆದರು ಕೂಡ ನಮ್ಮ ಕನ್ನಡ ತನ್ನದೆ ಆದ ಸ್ಥಾನಮಾನವನ್ನು ಕಾಯ್ದುಕೊಂಡಿದೆ. ಸುಲಿದ ಬಾಳೆಯ ಹಣ್ಣಿನ ರೀತಿ ಸುಲಭವಾಗಿ ಅರಗಿಸಿಕೊಳ್ಳಬಹುದು ಎಂದು ಹೇಳಿದರು.
ಕನ್ನಡದ ಜಾನಪದ ಹಾಡು ಹಾಗೂ ಇತರ ಕುವೆಂಪುರವರ ಹಲವು ಕಾವ್ಯಗಳನ್ನು ರಾಗವಾಗಿ ಹಾಡಿ ವಿದ್ಯಾರ್ಥಿಗಳ ಮನಗೆದ್ದರು. ಕಮ್ಯೂನಿಕೇಟಿವ್ ಇಂಗ್ಲೀಷ್ ತರಗತಿಯಲ್ಲಿ ಮಾಲತಿ ದೇವಯ್ಯ ಅವರು ಇಂಗ್ಲೀಷ್‍ನಲ್ಲಿ ಮಾತನಾಡಲು ಮತ್ತು ಸರಾಗವಾಗಿ ವಾಕ್ಯಗಳನ್ನು ಬಳಸುವಾಗ ಪ್ರಾಥಮಿಕವಾದ ಕೆಲವು ವ್ಯಾಕರಣ ಅಂಶಗಳನ್ನು ಹೇಗೆ ಉಪಯೋಗಿಸಬೇಕೆಂದು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಹಾಗೂ ಉಪನ್ಯಾಸಕ ವರ್ಗದವರು ಹಾಜರಿದ್ದರು.ನಾಪೆÉÇೀಕ್ಲು: ಮೈಸೂರಿನಲ್ಲಿ ನಡೆದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ನಾಪೆÉÇೀಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗೆಲವು ಸಾಧಿಸಿದ್ದಾರೆ.
ಶಾಲೆಯ ವಿಧ್ಯಾರ್ಥಿಗಳಾದ ದಿಪ್ನ ದೇವಯ್ಯ, ಪರಮ್ ಪೂವಯ್ಯ, ಅಸ್‍ರಿನ್, ಹಿತಾಶ್ರೀ, ಗ್ರೀಷ್ಮಾ, ಹರ್ಷಿಣಿ ಗೆಲವು ಸಾಧಿಸುವದರ ಮೂಲಕ ಪದಕ ಗಳಿಸಿದ್ದಾರೆ. ಇವರುಗಳು ಕರಾಟೆ ಶಿಕ್ಷಕ ಸೆನ್‍ಸಾಯಿ ಚಂದ್ರನ್ ಅವರ ಶಿಷ್ಯರಾಗಿದ್ದಾರೆ.
ಗೋಣಿಕೊಪ್ಪಲು: ಜಿಲ್ಲಾ ಸಿಬಿಎಸ್‍ಇ ಶಾಲೆಗಳ ಬ್ರಹ್ಮಗಿರಿ ಸಹೋದಯ ಕ್ಲಸ್ಟರ್‍ನ ಅಡಿಯಲ್ಲಿ ಇತ್ತೀಚೆಗೆ ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಜಿಲ್ಲಾಮಟ್ಟದ ‘ಬ್ರೈನ್ ಸ್ಟಾರ್ಮರ್ಸ್’ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲಾ ಸಂಸ್ಥಾಪಕಿ ಶಾಂತಿ ಅಚ್ಚಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ವಿಜ್ ಮಾಸ್ಟರ್ ಅರುಣ್‍ಕುಮಾರ್ ಹಲವು ಹಂತಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ನಾಪೋಕ್ಲುವಿನ ಅಂಕುರ್ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ, ನ್ಯಾಷನಲ್ ಅಕಾಡೆಮಿ ಶಾಲಾ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಾಗೂ ಎಸ್‍ಎಂಎಸ್ ಅರಮೇರಿ ಶಾಲಾ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮಡಿಕೇರಿಯ ಕ್ರೆಸೆಂಟ್ ಶಾಲೆ, ಕೊಡಗು ವಿದ್ಯಾಲಯ ಹಾಗೂ ಕೂಡಿಗೆಯ ಸೈನಿಕ್ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 6 ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ಲೀಸಾ ನಡೆಸಿಕೊಟ್ಟರು. ರಿಶಾ ನಾಣಯ್ಯ ಸ್ವಾಗತಿಸಿ, ಚಿಣ್ಣಪ್ಪ ವಂದಿಸಿದರು. ಈ ಸಂದರ್ಭ ಶಾಲಾ ವಿದ್ಯಾರ್ಥಿಗಳು ವಸ್ತು ಪ್ರದರ್ಶನವನ್ನು ಏರ್ಪಡಿಸಿದ್ದರು. ವಿಜ್ಞಾನ, ಗಣಿತ, ಸಮಾಜ, ಕಂಪ್ಯೂಟರ್, ಆರ್ಟ್ ಮತ್ತು ಕ್ರ್ಯಾಪ್ಟ್ ಹಾಗೂ ನರ್ಸರಿ ಶಾಲಾ ವಿದ್ಯಾರ್ಥಿಗಳು ವಿಷಯಕ್ಕೆ ಸಂಬಂಧಿಸಿದ ವಿವಿಧ ವಸ್ತುಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದರು. ಮಕ್ಕಳ ಸೃಜನಶೀಲ ವಸ್ತು ಪ್ರದರ್ಶನವನ್ನು ವೀಕ್ಷಿಸಿದ ಸಹೃದಯರು ಹರ್ಷ ವ್ಯಕ್ತಪಡಿಸಿದರು.
ವೀರಾಜಪೇಟೆ: ಚೇರಂಬಾಣೆಯ ರಾಜರಾಜೇಶ್ವರಿ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಶಟಲ್ ಬ್ಯಾಡ್‍ಮೆಂಟನ್ ಪಂದ್ಯದಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿನಿಯರಾದ ಗಾಯನ ಬೋಪಣ್ಣ, ಗಾನವಿ ಬೋಪಣ್ಣ ಮತ್ತು ಕೆ.ಪಿ. ಚೋಂದಮ್ಮ ಡಬಲ್ಸ್‍ನಲ್ಲಿ ಪ್ರಥಮ ಸ್ಥಾನ ಮತ್ತು ಸಿಂಗಲ್ಸ್‍ನಲ್ಲಿ ಕೆ.ಪಿ. ಚೋಂದಮ್ಮ ದ್ವಿತೀಯ ಸ್ಥಾನ ಪಡೆದಿದ್ದಾರೆ. ಶಾಲೆಯ ಪ್ರಾಂಶುಪಾಲ ಪಿ.ಎನ್. ವಿನೋದ್ ಮತ್ತು ದೈಹಿಕ ಶಿಕ್ಷಕ ಕೆ.ಜಿ. ಮಿಥುನ್ ಚಿತ್ರದಲ್ಲಿದ್ದಾರೆ.
ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ಇತ್ತೀಚೆಗೆ ವಿವಿಧ ರಾಜ್ಯಗಳ ಸಂಸ್ಕøತಿಯನ್ನು ಸಾರುವ ವೈವಿಧ್ಯಮಯ ಛದ್ಮವೇಷ ಸ್ಪರ್ಧೆ ನಡೆಯಿತು. ನರ್ಸರಿ ಶಾಲಾ ವಿದ್ಯಾರ್ಥಿಗಳು ಕೇರಳ, ರಾಜಾಸ್ಥಾನ, ಪಂಜಾಬಿ, ಗುಜರಾತಿನ ಸಂಸ್ಕøತಿಯನ್ನು ಸಾರುವ ವೇಷವನ್ನು ತೊಟ್ಟು ವಿಭಿನ್ನ ನಡಿಗೆ ಹಾಗೂ ಪ್ರದರ್ಶನದ ಮೂಲಕ ನೆರೆದಿದ್ದವರ ಹೃನ್ಮನವನ್ನು ತಣಿಸಿದರು.ಶ್ರೀಮಂಗಲ: ಜೆ.ಸಿ. ವಿದ್ಯಾಸಂಸ್ಥೆಯ ವತಿಯಿಂದ ನಡೆದ 29ನೇ ವಾರ್ಷಿಕೋತ್ಸವ ಶ್ರೀಮಂಗಲ ನಾಡಿನ ಕುಮಟೂರು ಗ್ರಾಮದಲ್ಲಿ ತೆರೆ ಕಂಡಿತು. ಸಭಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ಓಮನ್ ವರ್ಗೀಸ್ ಮಾತನಾಡಿ, ವಿದ್ಯಾರ್ಥಿಗಳು ಶ್ರೀಮಂಗಲ: ಜೆ.ಸಿ. ವಿದ್ಯಾಸಂಸ್ಥೆಯ ವತಿಯಿಂದ ನಡೆದ 29ನೇ ವಾರ್ಷಿಕೋತ್ಸವ ಶ್ರೀಮಂಗಲ ನಾಡಿನ ಕುಮಟೂರು ಗ್ರಾಮದಲ್ಲಿ ತೆರೆ ಕಂಡಿತು. ಸಭಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ಓಮನ್ ವರ್ಗೀಸ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕೊಡಗು ಜಿಲ್ಲೆಯ ತೃತೀಯ ಸ್ಥಾನ ಪಡೆದ ಸಿ.ಆರ್. ದಿಯಾ ಅವರನ್ನು ಸನ್ಮಾನಿಸಲಾಯಿತು. ನಂತರ ಪ್ರೌಢಶಾಲಾ ಮುಖ್ಯ ಶಿಕ್ಷಕ ಎಸ್. ಸತೀಶ್ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕೆ.ಕೆ. ಸಿಂದು ಅವರು ವಾರ್ಷಿಕ ವರದಿಯನ್ನು ಸಲ್ಲಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ನೆರವೇರಿತು. ಮಕ್ಕಳ ನೃತ್ಯ, ನಾಟಕ, ಸಂಗೀತ ಹಾಗೂ ಮೈಮಾ ಶೋಗಳು ನೆರೆದಿದ್ದ ಪೋಷಕರನ್ನು ಹಾಗೂ ಸಾರ್ವಜನಿಕರನ್ನು ರಂಜಿಸಿತು. ಸಹ ಶಿಕ್ಷಕರಾದ ಗೀತಾಂಜಲಿ ಹಾಗೂ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕಿ ಚಂಚಲ್ ಸ್ವಾಗತಿಸಿದರು. ಸಹ ಶಿಕ್ಷಕರಾದ ಬಿಂದುಸಾರ ವಂದಿಸಿದರು.