ಗೋಣಿಕೊಪ್ಪಲು: ಸ್ವಾಮಿ ವಿವೇಕಾನಂದರ ಆದರ್ಶಗಳಾದ ಸೇವೆ, ರಾಷ್ಟ್ರಪ್ರೇಮ, ನಿಸ್ವಾರ್ಥ ಮನೋಭಾವನೆ, ವಿಶ್ವ ಸಹೋದರತೆ ಹಾಗೂ ಆತ್ಮ ವಿಶ್ವಾಸ ಯುವಕರಿಗೆ ಅನುಕರಣೀಯ ಎಂದು ಅರಮೇರಿ ಕಳಂಚೇರಿ ಮಠದ ಮುಖ್ಯಸ್ಥ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಾಲಿಬೆಟ್ಟ ಸರಕಾರಿ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂತರು ತಮ್ಮ ನಿಸ್ವಾರ್ಥ ಸೇವೆಯಿಂದಾಗಿ ಭಾರತದಲ್ಲಿ ಒಂದು ಉತ್ತಮ ಸಂಸ್ಕøತಿಯನ್ನು ಬೆಳೆಸಿದ್ದಾರೆ. ಈ ಸಂಸ್ಕøತಿಯನ್ನು ಯುವಕರು ರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು, ಯುವ ಜನತೆ ತಾಂತ್ರೀಕತೆಗೆ ಗುಲಾಮರಾಗದೆ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಷ್ಟ್ರವನ್ನು ಬಲಿಷ್ಟಗೊಳಿಸಲು ಕರೆ ನೀಡಿದರು.

ಮುಖ್ಯ ಭಾಷಣಗಾರರಾಗಿ ಆಗಮಿಸಿದ ಅಮ್ಮತ್ತಿ ಅಯ್ಯಪ್ಪ ದೇವಾಲಯದ ಮುಖ್ಯಸ್ಥ ಗುರುರಾಜ್ ಭಟ್ ಮಾತನಾಡಿ, ಯುವಕರು ಸದೃಢ ಮನಸ್ಸು ಹಾಗೂ ಶರೀರವನ್ನು ಬೆಳಸಿಕೊಳ್ಳಬೇಕು ತಾರುಣ್ಯದಲ್ಲಯೇ ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಬೇಕೆಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪಾಲಿಬೆಟ್ಟದ ಲೂರ್ದ್ ಮಾತೆ ದೇವಾಲಯದ ಚಾಲ್ರ್ಸ್ ನರ್ಹೋನ ಮಾತನಾಡಿ, ಯುವಜನರು ತಮಗೆ ವಹಿಸಿದ ಯಾವದೇ ವೃತ್ತಿಯನ್ನು ಶ್ರದ್ಧೆಯಿಂದ ನಿರ್ವಹಿಸಿದರೆ ಯಶಸ್ಸು ದೊರಕುತ್ತದೆ ಎಂದರು.

ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಕೂತಂಡ ಬೋಜಮ್ಮ ಮಂದಣ್ಣ ಕೂರ್ಗ್ ವೆಲ್‍ನಸ್ ಫೌಂಡೇಶನ್ ಸದಸ್ಯ ವರುಣ್ ಉಪಸ್ಥಿತರಿದ್ದರು. ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದ ಸಾಯಿಶಂಕರ್ ವಿದ್ಯಾಸಂಸ್ಥೆಯ ಮುಖ್ಯಸ್ಥ ಝರು ಗಣಪತಿ ಹಾಗೂ ಕಾವೇರಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಟಿ. ಸಂತೋಷ್ ಅವರನ್ನು ಎನ್.ಎಸ್.ಎಸ್. ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ವಿದ್ಯಾಥಿಗಳಿಗೆ ರಸಪ್ರಶ್ನೆ, ವಿವೇಕಾನಂದರ ದಿವ್ಯವಾಣಿ ಪಠನ, ಚಿತ್ರಕಲೆ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ತಿರುವಾದಿರ ಹಾಗೂ ಉಮ್ಮತ್ತಾಟ್ ನೃತ್ಯವನ್ನು ಪ್ರದರ್ಶಿಸಲಾಯಿತು. ಪ್ರಾಂಶುಪಾಲೆ ಡಾ. ಕೆ.ಎಂ. ಭವಾನಿ ಅವರ ಅಧ್ಯಕ್ಷತೆಯ ವಹಿಸಿದರು. ಜೀವಿತ ಮತ್ತು ಪಾರ್ವತಿ ಪ್ರಾರ್ಥಿಸಿದರು. ಉಪನ್ಯಾಸಕ ಪಿ.ಆರ್. ಶಿವದಾಸ್ ಸ್ವಾಗತಿಸಿದರು. ಉಪನ್ಯಾಸಕಿ ಎಂ.ಬಿ. ಪಾರ್ವತಿ ವಂದಿಸಿದರು. ಸುನಿತಾ ಕೆ.ಕೆ. ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಇಂದು, ಮೇಘನ, ಇನ್ನಿತರರು ಇದ್ದರು.

ನಾಪೆÇೀಕ್ಲು: ನಾಪೆÇೀಕ್ಲು ಶ್ರೀ ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಇಂಟರ್ಯಾಕ್ಟ್ ಕ್ಲಬ್‍ನ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಯುವ ದಿನಚಾರಣೆಯನ್ನು ಆಚರಿಸಲಾಯಿತು.

ಇಂಟರ್ಯಾಕ್ಟ್ ಕ್ಲಬ್‍ನ ಸಂಯೋಜಕಿ ಶಿಕ್ಷಕಿ ಸುಬ್ಬಮ್ಮ ಟಿ.ಆರ್. ಯುವಜನತೆಯ ಶಕ್ತಿ ಎಂಬ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲೆ ಬಿ.ಎಂ. ಶಾರದ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಕರಾದ ಎಂ.ಎಂ. ಕವಿತಾ, ಕಾಳಯ್ಯ, ಇಂಟರ್ಯಾಕ್ಟ್ ಕ್ಲಬ್‍ನ ಪದಾಧಿಕಾರಿಗಳು ಇದ್ದರು.ಮಡಿಕೇರಿ: ಆಧುನಿಕ ಜೀವನ ಶೈಲಿಯಿಂದ ಯುವಜನತೆಯು ಹಿಂದಿನ ಸಾಂಪ್ರದಾಯಿಕ ಜೀವನಕ್ರಮವನ್ನು ಮರೆಯುತ್ತಿದ್ದು ಪರಿಣಾಮವಾಗಿ ದೈಹಿಕ ಸದೃಢತೆಯನ್ನು ಕಳೆದುಕೊಳ್ಳುತ್ತಿದ್ದು ಯೋಗ ಹಾಗೂ ಧ್ಯಾನದಿಂದ ಉತ್ತಮ ವ್ಯಕ್ತಿತ್ವ ಮತ್ತು ದೈಹಿಕ ಸದೃಢತೆ ಲಭಿಸುತ್ತದೆ ಎಂದು ಮರಗೋಡು ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಕೆ. ಶಿವಪ್ರಸಾದ್ ಅಭಿಪ್ರಾಯಪಟ್ಟರು.

ನೆಹರೂ ಯುವ ಕೇಂದ್ರ ಕೊಡಗು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟಗಳ ಆಶ್ರಯದಲ್ಲಿ ಹುಲಿತಾಳದ ಭಗತ್ ಯುವಕ ಸಂಘದ ವತಿಯಿಂದ ಸ್ಥಳೀಯ ಸಮುದಾಯಭವನದಲ್ಲಿ ವಿವೇಕಾನಂದ ಯುವ ಸಪ್ತಾಹದ ಅಂಗವಾಗಿ ಜರುಗಿದ ದೈಹಿಕ ಸದೃಢತೆಯ ದಿನಾಚರಣೆಯಲ್ಲಿ ಮುಖ್ಯ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಯುವಕ ಸಂಘದ ಗೌರವಾಧ್ಯಕ್ಷ ಪಿ.ಎಸ್. ರವಿಕೃಷ್ಣ ಮಾತನಾಡಿ, ಇಂದಿನ ಯುವÀ ಜನತೆಯು ಜಾತಿಯ ಗೋಡೆಯನ್ನು ತೊಡೆದು ಹಾಕಿ ಐಕ್ಯತೆಯ ಮಂತ್ರವನ್ನು ಪಠಿಸಬೇಕಿದೆ. ಈ ಜಗತ್ತು ಎನ್ನುವದು ನಮ್ಮನ್ನು ನಾವು ಗಟ್ಟಿಗೊಳಿಸಲೆಂದೇ ಇರುವ ವ್ಯಾಯಾಮ ಶಾಲೆ ಎಂಬ ವಿವೇಕವಾಣಿಯನ್ನು ಸ್ಮರಿಸಿ ಯುವ ಜನತೆಯು ಸದೃಢರಾಗಬೇಕಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ಹಾಕತ್ತೂರು ಗ್ರಾಮ ಪಂಚಾಯಿತಿ ಸದಸ್ಯೆ ಹೆಚ್.ಪಿ. ಪೂವಮ್ಮ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಯುವಕ ಸಂಘದ ನಿಕಟಪೂರ್ವ ಅಧ್ಯಕ್ಷ ಪಿ.ಎಂ. ಶರತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭಗತ್ ಯುವಕ ಸಂಘದ ಅಧ್ಯಕ್ಷ ಹೆಚ್.ಎಸ್. ವಿನೋದ್, ಕಾರ್ಯದರ್ಶಿ ಹೆಚ್. ನಂದಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.