ಶನಿವಾರಸಂತೆ, ಜ. 18: ಗೋಪಾಲಪುರ ಗ್ರಾಮದಲ್ಲಿ ಸೋಮವಾರ ತೀರ್ಥನ್ (8) ಬಾಲಕ ಬೆಳಿಗ್ಗೆ ರಸ್ತೆ ದಾಟುತ್ತಿದ್ದಾಗ ಶನಿವಾರಸಂತೆ ಕಡೆಯಿಂದ ಬಂದ ಮೋಟಾರ್ ಸೈಕಲ್ (ಕೆ.ಎ. 12 ಆರ್. 1958) ಡಿಕ್ಕಿ ಹೊಡೆದ ಪರಿಣಾಮ ಬಾಲಕನಿಗೆ ಗಾಯವಾಗಿದ್ದು, ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ತೀರ್ಥನ್ ತಾಯಿ ಸರಸ್ವತಿ ಮಗನನ್ನು ಶಾಲೆಗೆ ಕಳುಹಿಸಲು ಶಾಲೆಯ ವ್ಯಾನ್ ಹತ್ತಿಸಲೆಂದು ಗ್ರಾಮದ ಅಂಗಡಿಯೊಂದರ ಮುಂದೆ ಬಿಟ್ಟು ಎಂದಿನಂತೆ ಮನೆಗೆ ತೆರಳಿದರು. ಆದರೆ ತೀರ್ಥನ್ ಮನೆಯಲ್ಲಿ ಡ್ರಾಯಿಂಗ್ ಶೀಟ್ ಮರೆತು ಬಂದಿದ್ದರಿಂದ ಅದನ್ನು ತರಲು ವಾಪಾಸು ಮನೆಗೆ ಬರಲು ರಸ್ತೆ ದಾಟುತ್ತಿದ್ದಾಗ ಶನಿವಾರಸಂತೆ ಕಡೆಯಿಂದ ಬಂದ ಮೋಟಾರ್ ಸೈಕಲಲ್ಲಿ ಬಂದ ಕಿರುಬಿಳಹ ಗ್ರಾಮದ ಕಿರಣ್‍ಕುಮಾರ್ ಎಂಬಾತ ಡಿಕ್ಕಿಪಡಿಸಿದ ಪರಿಣಾಮ ತೀರ್ಥನ್ ಕೆಳಗಡೆ ಬಿದ್ದು, ಬೈಕಿನಡಿಗೆ ಸಿಲುಕಿ, ಮುಖದ ಭಾಗ, ಎಡದ ಭಾಗದ ಹೊಟ್ಟೆ ಹಾಗೂ ಎರಡು ಕಾಲಿನ ಮಂಡಿಯ ಭಾಗ, ಎಡಕ್ಕೆ, ಮೊಣಕೈ ಭಾಗಗಳಿಗೆ ಗಾಯವಾಗಿರುತ್ತದೆ. ಗಾಯಾಳುವನ್ನು ಹಾಸನದ ಚಾಮರಾಜೇಂದ್ರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಶನಿವಾರಸಂತೆ ಪೊಲೀಸ್ ಠಾಣೆಗೆ ಬಾಲಕನ ತಂದೆ ಎಸ್.ವಿ. ಕುಮಾರ್ ನೀಡಿದ ದೂರಿನ ಮೇರೆ, ಹೆಡ್‍ಕಾನ್ಸ್‍ಟೇಬಲ್ ಹೆಚ್.ಸಿ. ಶಿವಣ್ಣ ಮೋಟಾರ್ ಸೈಕಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.