ಸುಂಟಿಕೊಪ್ಪ, ಜ. 18: ಅತೀವೇಗದಿಂದ ನಿಯಂತ್ರಣ ಕಳೆದುಕೊಂಡ ಬೈಕ್ ವೊಂದು ಹೆದ್ದಾರಿ ಬದಿಯ ಮೋರಿಗೆ ಡಿಕ್ಕಿ ಒಡೆದ ಪರಿಣಾಮ ಸವಾರ ಹಾಗೂ ಹಿಂಬದಿ ಸವಾರ ತೀವ್ರಗಾಯದಿಂದ ಗಂಭೀರ ಸ್ಥಿತಿಗೊಳಗಾಗಿರುವ ಘಟನೆ ವರದಿಯಾಗಿದೆ. ಇದೇ ಬೈಕ್ ನಲ್ಲಿದ್ದ ಇನ್ನೋರ್ವ ಹಿಂಬದಿ ಸವಾರ ಗಾಯಕ್ಕೊಳಗಾಗಿದ್ದಾನೆ. ಗರಗಂದೂರು ಚಾಮುಂಡೇಶ್ವರಿ ಕಾಲೋನಿ ನಿವಾಸಿ ಶಿವನ್, ಗುಂಡುಗುಟ್ಟಿಯ ಪುನಿತ್ (ಮುನ್ನ) ಹಾಗೂ ಪಂಪ್ ಹೌಸ್ ರಸ್ತೆಯ ನಿವಾಸಿ ಮಣಿಕಂಠ ಎಂಬವರು ಬೈಕ್ ಅವಘಡಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದವರಾಗಿದ್ದಾರೆ. ನಿನ್ನೆ (ತಾ.17) ರಾತ್ರಿ 11.15ರ ಸಮಯದಲ್ಲಿ ಮೂವರು ಕುಶಾಲನಗರದಲ್ಲಿ ವಿವಾಹ ಸಮಾರಂಭವೊಂದನ್ನು ಮುಗಿಸಿ ಕೆ.ಎ.12 ಆರ್. 9334 ಬೈಕ್ ನಲ್ಲಿ ಸುಂಟಿಕೊಪ್ಪ ಕಡೆಗೆ ಬರುತ್ತಿದ್ದಾರೆ. ಶಿವನ್ ಬೈಕ್ ಚಲಾಯಿಸುತ್ತಿದ್ದು, ಪುನಿತ್ ಮಧ್ಯ ಭಾಗದಲ್ಲಿ ಮತ್ತು ಮಣಿಕಂಠ ಸೇರಿ ಬೈಕ್‍ನಲ್ಲಿ ಕುಳಿತಿದ್ದರು. ಮಾರ್ಗ ಮಧ್ಯದಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್ ಕೊಡಗg Àಹಳ್ಳಿಯ ಸ್ಪೈಸಸ್ ಅಂಗಡಿ ಮುಂಭಾಗದ ಮೋರಿಗೆ ಡಿಕ್ಕಿ ಒಡೆದಿದೆ. ಬೈಕ್ ಮೋರಿಗೆ ಅಪ್ಪಳಿಸಿದ ರಭಸಕ್ಕೆ ಕೆಳಗೆ ಬಿದ್ದ ಸವಾರ ಶಿವನ್ ಅವರ ತಲೆ ಮತ್ತು ಎರಡೂ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಮಧ್ಯದಲ್ಲಿ ಕುಳಿತಿದ್ದ ಪುನಿತ್ (ಮುನ್ನ)ರವರ ಎಡಕಾಲು ಹಾಗೂ ತಲೆಗೆ ಪೆಟ್ಟಾಗಿದೆ. ಇವರಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನೊಬ್ಬ ಹಿಂಬದಿ ಸವಾರ ಮಣಿಕಂಠ ರವರಿಗೂ ಗಾಯವಾಗಿದ್ದು ಮಡಿಕೇರಿ ಆಸ್ಪತ್ರೆಗೆ ಸೇರಿಸಲಾಗಿದೆ.