ಮಡಿಕೇರಿ, ಜ. 18: ಪೊನ್ನಂಪೇಟೆಯ ಶ್ರೀ ರಾಮಕ್ರಷ್ಣಾಶ್ರಮದಿಂದ ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಆರ್ಥಿಕ ಸುಧಾರಣಾ ಹೆಜ್ಜೆಯಿರಿಸಲಾಗಿದೆ. ರಾಜ್ಯದ ವಿವಿಧ ಕಡೆಗಳ ಪ್ರಮುಖರು ಆಶ್ರಮಕ್ಕೆ ನೀಡಿದ ಧನ ಸಹಾಯ ಹಾಗೂ ಸಾಮಗ್ರಿಗಳು ಸೇರಿದಂತೆ ಇದುವರೆಗೆ ಒಟ್ಟು ರೂ. 70 ಲಕ್ಷದವರೆಗೆ ಸಂತ್ರಸ್ತರಿಗೆ ವಿತರಿಸಲಾಗಿದೆ. ಮುಂದಿನ ಹೆಜ್ಜೆಯಾಗಿ ಇದೀಗ ಆರ್ಥಿಕ ಸುಧಾರಣೆಗೆ ಪೂರಕವಾದ ಯೋಜನೆಗಳ ಮೂಲಕ ಸಂತ್ರಸ್ತರು ಪುನ:ಶ್ಚೇತನ ಪಡೆಯುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಶ್ರಮದ ಅಧ್ಯಕ್ಷರಾದ ಸ್ವಾಮಿ ಬೋಧಸ್ವರೂಪಾನಂದ ಹಾಗೂ ಸ್ವಯಂ ಸೇವಕರಾದ ಸುಬೋಧ್ ರಾವ್ “ಶಕ್ತಿ” ಗೆ ಮಾಹಿತಿಯಿತ್ತಿದ್ದಾರೆ.ಆರ್ಥಿಕ ಸುಧಾರಣಾ ಯೋಜನೆಗಳ ಪೈಕಿ ಮಾದಾಪುರ ಮತ್ತು ಸೂರ್ಲಬ್ಬಿಗಳಲ್ಲಿ ಹೊಲಿಗೆ ಹಾಗೂ ಕಸೂತಿ ತರಬೇತಿ ಘಟಕಗಳ ಸ್ಥಾಪನೆ. ಈಗಾಗಲೇ ಉದ್ದೇಶಿತ 50 ಹೊಲಿಗೆ ಯಂತ್ರಗಳ ಪೈಕಿ 30 ಯಂತ್ರಗಳನ್ನು ಒದಗಿಸಿ ಕಾರ್ಯಾರಂಭಗೊಂಡಿದೆ; ಆದರೆ, ಈ ಘಟಕವನ್ನು ತಾ. 21 ರಂದು ಉದ್ಘಾಟಿಸಲಾಗುವದು.
ಸೂರ್ಲಬ್ಬಿಯಲ್ಲಿ ಜೇನುಕೃಷಿ ತರಬೇತಿಯನ್ನು ಪೊನ್ನಂಪೇಟೆ ಅರಣ್ಯ
(ಮೊದಲ ಪುಟದಿಂದ) ಕಾಲೇಜಿನ ಸಹಕಾರದೊಂದಿಗೆ ನೀಡಲಾಗುತ್ತದೆ. ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಸಹಯೋU Àದೊಂದಿಗೆ ಸೂರ್ಲಬ್ಬಿಯಲ್ಲಿ ಆಹಾರ ಪರಿಷ್ಕರಣಾ ತರಬೇತಿ ಘಟಕ ಸ್ಥಾಪಿಸಲಾಗುತ್ತದೆ.. ಮಾದಾಪುರ ಮತ್ತು ಸೂರ್ಲಬ್ಬಿಗಳಲ್ಲಿ ಯುವಕರಿಗೆ ವಾಹನ ಚಾಲನಾ ಪರವಾನಗಿ ಒದಗಿಸಲಾಗುತ್ತದೆ. ಪೊನ್ನಂಪೇಟೆ ಯಲ್ಲಿ ಹೊಲಿಗೆ ತರಬೇತಿ ಘಟಕ ಸ್ಥಾಪನೆಗೊಳ್ಳಲಿದ್ದು, ಈಗಾಗಲೇ ತರಬೇತಿಯು ಕಿರು ಪ್ರಮಾಣದಲ್ಲಿ ಕಾರ್ಯಾರಂಭಗೊಂಡಿದೆ. ಜಿಲ್ಲಾಡಳಿ ತವು ಸಂತ್ರಸ್ತರಿಗೆ ಮನೆ ನಿರ್ಮಾಣ ಮೂಲಕ ಪುನರ್ವಸತಿ ಕಾರ್ಯಕ್ಕೆ ಇಳಿದಿದೆ. ಆದರೆ. ಸಂತ್ರಸ್ತರಿಗೆ ಆರ್ಥಿಕ ಸುಧಾರಣೆಗೆ ಅಗತ್ಯವಾದ ಕಾರ್ಯಗಳನ್ನು ಕೈಗೊಳ್ಳ್ಳಲು ಉದಾರ ದಾನಿಗಳ ನೆರವಿನಿಂದ ರಾಮಕೃಷ್ಣಾಶ್ರಮವು ಸದಾ ಸನ್ನದ್ಧವಾಗಿರುತ್ತದೆ ಎಂದು ಸ್ವಾಮಿ ಬೋಧಸ್ವರೂಪಾನಂದ ಅವರು ಭರವಸೆಯಿತ್ತರು.
ಮಾದಾಪುರದಲ್ಲಿ ಉದ್ಘಾಟನೆ
ಮಾದಾಪುರದಲ್ಲಿ ಹೊಲಿಗೆ ಮತ್ತು ಕಸೂತಿ ತರಬೇತಿ ಘಟಕದ ಅಧಿಕೃತ ಉದ್ಘಾಟನೆಯನ್ನು ತಾ. 21 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು. ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ, ಉಪವಿಭಾಗಾಧಿಕಾರಿ ಜವರೇಗೌಡ ಹಾಗೂ “ಶಕ್ತಿ” ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅತಿಥಿಗಳಾಗಿ ಆಗಮಿಸಲಿದ್ದಾರೆ.