ಮಡಿಕೇರಿ, ಜ. 17: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ವಿಕಲಚೇತನರಿಗೆ ಆಧಾರ ಯೋಜನೆಯ ಸರ್ಕಾರದ ಆದೇಶ ಮತ್ತು ಪರಿಷ್ಕøತ ಮಾರ್ಗಸೂಚಿಯ ಅನುಸಾರ ಆದೇಶ ಹೊರಡಿಸಲಾಗಿದ್ದು, ಸ್ವಯಂ ಉದ್ಯೋಗ ನಡೆಸಲು ಆಧಾರ ಯೋಜನೆಯಡಿ ರೂ. 1 ಲಕ್ಷಗಳಿಗೆ ಪರಿಸ್ಕøತಗೊಳಿಸಲಾಗಿದ್ದು ಇದರಲ್ಲಿ ಶೇ.50 ರಷ್ಟು ಬ್ಯಾಂಕ್ ಸಾಲ ಮತ್ತು ಶೇ.50 ರಷ್ಟು ಸಬ್ಸಿಡಿ ಮೊತ್ತವನ್ನು ನೀಡಲಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳ ಜೊತೆಗೆ ಜಿಲ್ಲಾ ಪತ್ತಿನ ಸಹಕಾರ ಬ್ಯಾಂಕ್ ಮತ್ತು ಮಹಿಳಾ ಸಹಕಾರ ಬ್ಯಾಂಕುಗಳ ಮೂಲಕವೂ ಸಾಲವನ್ನು ಪಡೆಯಬಹುದಾಗಿರುತ್ತದೆ. ಕೊಡಗು ಜಿಲ್ಲೆಯ ಪ.ಜಾತಿ, ಪ.ಪಂ. ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ವಿಕಲಚೇತನರು ಈ ಯೋಜನೆಯ ಷರತ್ತುಗೊಳಪಟ್ಟು ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕೋರಿದೆ. ಅರ್ಜಿಯನ್ನು ಕಚೇರಿಯಿಂದ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ನ್ಯಾಯಾಲಯದ ಮುಂಭಾಗ ಕೋಟೆ ಆವರಣ, ಮಡಿಕೇರಿಯ ದೂರವಾಣಿ ಸಂಖ್ಯೆ: 08272-222830 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.