*ಗೋಣಿಕೊಪ್ಪಲು, ಜ. 17 : ಅಮ್ಮತ್ತಿ ಮಿಲನ್ಸ್ ಬಾಯ್ಸ್ ಯೂತ್ ಕ್ಲಬ್ ವತಿಯಿಂದ ನಡೆಯುವ ರಾಜ್ಯ ಮಟ್ಟದ 7ನೇ ವರ್ಷದ ಅಮ್ಮತ್ತಿ ಮಿಲನ್ಸ್ ಕಪ್ ಫುಟ್‍ಬಾಲ್ ಪಂದ್ಯಾಟ ತಾ. 19 ರಂದು ಅಮ್ಮತ್ತಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆಯಲಿದೆ.

ಅಂದು 9.30 ಕ್ಕೆ ಪಂದ್ಯಾಟಕ್ಕೆ ಚಾಲನೆ ದೊರೆಯಲಿದ್ದು ಸುಮಾರು 16 ತಂಡಗಳು ರಾಜ್ಯ ಹಾಗೂ ಕೇರಳ, ತಮಿಳುನಾಡಿನಿಂದ ತಂಡಗಳು ಬಾಗವಹಿಸಲಿದ್ದು ಈಗಾಗಲೇ ತಂಡಗಳು ನೋಂದಾವಣೆಗೊಂಡಿವೆ.

ಅಮ್ಮತ್ತಿ ಮಿಲನ್ ಬಾಯ್ಸ್ ಯೂತ್ ಕ್ಲಬ್ ಅಧ್ಯಕ್ಷ ವಿ.ಎಸ್. ಚಂದ್ರ ಅವರ ಅಧ್ಯಕ್ಷತೆಯಲ್ಲಿ ಕೆ.ಡಿ.ಎಫ್.ಎ. ಅಧ್ಯಕ್ಷ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯೆ ಶೋಭ ಶ್ರೀನಿವಾಸ್, ಕಾರ್ಮಾಡ್ ಗ್ರಾಮ ಪಂಚಾಯಿತಿ ಸದಸ್ಯ ಮುಕ್ಕಾಟೀರ ಸಂತೋಷ್, ನಿರನ್ ನಾಣಯ್ಯ ಬೆಳೆಗಾರರಾದ ಕುಟ್ಟಂಡ ಎಂ. ಅಯ್ಯಪ್ಪ, ಪೂದ್ರಿಮಾಡ ಗಗನ್, ಸಜೀವ ಉದ್ಯಮಿಗಳಾದ ಕೆ.ಎಂ. ಹಂಸ, ಚುಮ್ಮಿ ರೈ, ಸುಬೈರ್, ಸಿ.ಕೆ. ಜಲೀಲ್, ಕೆ.ಡಿ.ಎಫ್ ಕೋಶಿಯ ಅಧಿಕಾರಿ ದೀಪು ಮಾಚಯ್ಯ, ಜಿ.ಎಂ.ಪಿ ಶಾಲೆ ಮುಖ್ಯ ಉಪಾಧ್ಯಾಯಿನಿ ಪುಲಿಯಂಡ ಲೀಲಾವತಿ, ಉಪಸ್ಥಿತರಿರುವರು.