ಮಡಿಕೇರಿ ಜ.17 : ಕೊಡವ ಕ್ಷಾತ್ರ ಬುಡಕಟ್ಟು ಜನರ ಸಮಗ್ರ ಕುಲಶಾಸ್ತ್ರ ಅಧ್ಯಯನ ಪುನರಾರಂಭವಾಗಿರುವದಕ್ಕೆ ಹರ್ಷ ವ್ಯಕ್ತಪಡಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ, ಕೊಡಗಿನ 842 ಕೊಡವ ಕುಟುಂಬಗಳ(ಕ್ಲಾನ್ಸ್) ಅಧ್ಯಯನಕ್ಕೆ ಜಿಲ್ಲೆಯ ಎಲ್ಲಾ ಕೊಡವ ಸಮುದಾಯ ಸಹಕಾರ ನೀಡಬೇಕೆಂದು ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಸ್ಸಾಂನ 6 ಜನಾಂಗೀಯ ಕುಲವನ್ನು ಅವರ ವಿಭಿನ್ನ ಮತ್ತು ವೈವಿಧ್ಯ ಸಾಂಸ್ಕøತಿಕ ಹೆಗ್ಗುರುತುಗಳನ್ನು ರಕ್ಷಿಸುವ ಸಲುವಾಗಿ ಸಂವಿಧಾನದ ಬುಡಕಟ್ಟು ಪಟ್ಟಿಗೆ ಸೇರಿಸಲು ಮಸೂದೆ ಮಂಡನೆಗೆ ತಯಾರಿ ನಡೆಸಿದೆ. ಇದೇ ಸಂದರ್ಭ ಕೊಡವರ ಅಪರೂಪದ ಸಾಂಸ್ಕøತಿಕ ಹೆಗ್ಗುರತನ್ನು ಸಂರಕ್ಷಿಸಲು ಆ ಮಸೂದೆ ವ್ಯಾಪ್ತಿಯಲ್ಲಿ ಕೊಡವ ಬುಡಕಟ್ಟು ಕುಲವನ್ನು ತರಬೇಕೆಂದು ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್‍ರವರನ್ನು ಆಗ್ರಹಿಸುವದಾಗಿ ತಿಳಿಸಿದರು.
ಕೊಡವ ಕುಲಶಾಸ್ತ್ರ ಅಧ್ಯಯನ ಮರು ಆರಂಭದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರಿಯಾಂಕ ಖರ್ಗೆರವರನ್ನು ವಿಕಾಸ ಸೌಧÀದಲ್ಲಿ ಭೇಟಿಯಾದ ಸಂದರ್ಭ ಅವರು, ತಮ್ಮ ಕಚೇರಿಗೆ ಸಮಾಜಕಲ್ಯಾಣ ಇಲಾಖಾಧಿಕಾರಿಗಳನ್ನು ಕರೆಸಿ, ತುರ್ತಾಗಿ ಸರ್ವೇಕಾರ್ಯ ಕೈಗೆತ್ತಿಕೊಳ್ಳಲು ಆದೇಶ ನೀಡಿದ್ದಾಗಿ ತಿಳಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಪ್ರಿಯಾಂಕ ಖರ್ಗೆಯವರು 2 ತಿಂಗಳೊಳಗೆ ಸರ್ವೇಕಾರ್ಯ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕೆಂದು ಆದೇಶಿಸಿದ ಹಿನ್ನೆಲೆಯಲ್ಲಿ ಇದೇ ಜ.13ರಂದು ಸಂಶೋಧನಾ ತನಿಖಾಧಿಕಾರಿ ಡಾ. ಮಧುಸೂದನ್‍ರವರ ನೇತೃತ್ವದಲ್ಲಿ ಮಡಿಕೇರಿ ತಾಲೂಕಿನ ಕಾಲೂರು ಮತ್ತು ಸೋಮವಾರಪೇಟೆಯ ಸೂರ್ಲಬ್ಬಿಗಳಲ್ಲಿ ಪೈಲಟ್ ಸರ್ವೇ ಮುಗಿಸಿದ್ದಾರೆ. ಮುಂದಿನ ಸರ್ವೇಕಾರ್ಯ 3 ತಾಲೂಕುಗಳಲ್ಲಿ 3 ಸಂಶೋಧನಾ ತಂಡಗಳಿಂದ ಮುಂದುವರೆದಿರುವದಾಗಿ ತಿಳಿಸಿದರು.
ಕೊಡವ ಸಮುದಾಯ ಬಾಂಧವರು ಉತ್ಪ್ರೇಕ್ಷಿತ ಮಾಹಿತಿ ನೀಡದೆ, ಸೂಕ್ತ ಮಾಹಿತಿ ನೀಡಬೇಕೆಂದು ಮನವಿ ಮಾಡಿದ ನಾಚಪ್ಪ, ಕೊಡವರನ್ನು ಕುಲಶಾಸ್ತ್ರ ಅಧ್ಯಯನದಲ್ಲಿ ಭಾಗಿಯಾಗುವಂತೆ ಮಾಡುವದರ ಮೂಲಕ ರಾಜ್ಯಾಂಗಖಾತ್ರಿ ಹಕ್ಕು ಪಡೆಯಲು ಅಣಿಗೊಳಿಸುವ ನಿಟ್ಟಿನಲ್ಲಿ ಸಿಎನ್‍ಸಿ ಸಂಘÀಟನೆ ವಿವಿಧೆÉಡೆ ಜನಜಾಗೃತಿ ಕಾರ್ಯಕ್ರಮ ರೂಪಿಸಿದೆ ಎಂದರು. ಚಂಬೆಬೊಳಿಯೂರ್ ಶ್ರೀ ಭದ್ರಕಾಳಿ ದೇವನೆಲೆಯಲ್ಲಿ, ಬಲಂಬೇರಿ ಶ್ರೀ ಅಗಸ್ತ್ಯೇಶ್ವರ ದೇವ ನೆಲೆಯಲ್ಲಿ ಸಭೆ ನಡೆಸಿರುವದಾಗಿ ತಿಳಿಸಿದರು.
2 ಕೋಟಿ ಸಿಖ್ ಸಮುದಾಯದ ಪೈಕಿ ಶೇ.2 ರಷ್ಟು ಮಂದಿ ಭಾರತದ ಸೇನೆ ಮತ್ತು ರಕ್ಷಣಾ ಪಡೆಯಲ್ಲಿದ್ದಾರೆ.ಆದರೆ 1.50 ಲಕ್ಷ್ಷದಷ್ಟಿರುವ ಕೊಡವರಲ್ಲಿ ಶೇ.50 ರಷ್ಟು ಮಂದಿ ಭಾರತದ ಸೇನೆ ಸೇರಿದಂತೆ ವಿವಿಧ ರಕ್ಷಣಾ ಪಡೆಗಳಲ್ಲಿ ದೇಶಕಾಯುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಮತ್ತು ಹುತಾತ್ಮರಾಗಿದ್ದಾರೆ. ಇಂತಹ ಸಮುದಾಯವನ್ನು ಕಾಪಾಡಿ ಮುಂದೆ ದೇಶರಕ್ಷಣೆ ಮತ್ತು ದೇಶಕಟ್ಟಲು ಬಳಸುವ ಕಾರ್ಯಕ್ಕಾಗಿಯಾದರೂ ಅವರನ್ನು ಉಳಿಸಲು ಸಂವಿಧಾನದ ಶೆಡ್ಯೂಲ್ ಪಟ್ಟಿಗೆ ಸೇರಿಸಿ ಸಂರಕ್ಷಿಸುವದು ಅನಿವಾರ್ಯವಾಗಿದೆ ಎಂದರು. ಕುಲಶಾಸ್ತ್ರ ಅಧ್ಯಯನದ ಬೇಡಿಕೆ ಕೊಡವರ ಹಕ್ಕೇ ಹೊರತು ಭಿಕ್ಷೆಯಲ್ಲವೆಂದು ನಾಚಪ್ಪ ಪ್ರತಿಪಾದಿಸಿದರು. ಸುದ್ದಿಗೋಷ್ಠಿಯಲ್ಲಿ ಪುಲ್ಲೇರ ಕಾಳಪ್ಪ ಉಪಸ್ಥಿತರಿದ್ದರು.