ಮಡಿಕೇರಿ, ಜ. 17: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಮೂಗು, ಶ್ವಾಸಕೋಶದ ರಹದಾರಿ ವಿಷಯದ ಬಗ್ಗೆ ಅಂಗರಚನಾ ಶಾಸ್ತ್ರ ವಿಭಾಗವು ಇಎನ್‍ಟಿ ವಿಭಾಗದ ಸಹಯೋU Àದೊಂದಿಗೆ ಸಂಘಟಿಸುತ್ತಿರುವ ಮುಂದುವರಿಕಾ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವು ತಾ. 19 ರಂದು ಬೆಳಗ್ಗೆ 10 ಗಂಟೆಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆಯಲಿದೆ. ಕೊಡಗು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಸುಮಾರು 100 ವೈದ್ಯರುಗಳು ಮತ್ತು ಎಂಬಿಬಿಎಸ್ ವಿದ್ಯಾರ್ಥಿಗಳು ಈ ವೈದ್ಯಕೀಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.