ಮಡಿಕೇರಿ, ಜ. 17: ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಭಾರತೀಯ ಗೋ ಪರಿವಾರದ ವತಿಯಿಂದ ಹಕ್ಕೊತ್ತಾಯ ಮಂಡನೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 1.5 ಲಕ್ಷಕ್ಕೂ ಅಧಿಕ ಮಂದಿ ಗೋ ರಕ್ಷಣೆಗೆ ಆಗ್ರಹಿಸಿ ಹಕ್ಕೊತ್ತಾಯ ಮಂಡಿಸಿದ್ದು, ಕೊಡಗು ಜಿಲ್ಲೆಯಲ್ಲಿ ತಾ. 21 ರಂದು ಸಂಜೆ 4 ಗಂಟೆಗೆ ಕೊಡಗು ಗೋ ಪರಿವಾರ, ಕೊಡಗು ಹವ್ಯಕ ವಲಯ ಹಾಗೂ ಗೋಪ್ರೇಮಿಗಳು ಸೇರಿ ಜಿಲ್ಲಾಧಿಕಾರಿ ಗಳ ಮೂಲಕ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಿಗೆ 4 ಸಾವಿರ ಭಿನ್ನಹ ಪತ್ರಗಳನ್ನು ಕಳುಹಿಸಿಕೊಡ ಲಾಗು ವದೆಂದು ಗೋ ಪರಿವಾರದ ಪ್ರಕಟಣೆ ತಿಳಿಸಿದೆ.