ಚೆಟ್ಟಳ್ಳಿ, ಜ. 17: ಸಮೀಪದ ಕಂಡಕರೆಯ ಹಯಾತುಲ್ ಇಸ್ಲಾಂ ಮದರಸದಲ್ಲಿ ಸುನ್ನಿ ಜಂಯ್ಯತುಲ್ ಮುಹಲ್ಲಿಮೀನ್ ಇಸ್ಲಾಮಿಕ್ ಕಲೋತ್ಸವ ತಾ. 20 ರಂದು ನಡೆಯಲಿದೆ ಎಂದು ಎಸ್.ಜೆ.ಎಂ ಇದರ ಜಿಲ್ಲಾಧ್ಯಕ್ಷರಾದ ಮುಸ್ತಫಾ ಸಖಾಫಿ ತಿಳಿಸಿದ್ದಾರೆ.

ಸೋಮವಾರಪೇಟೆ, ಪಾಲಿಬೆಟ್ಟ, ವೀರಾಜಪೇಟೆ, ನಾಪೋಕ್ಲು, ಮೂರ್ನಾಡು ರೇಂಜ್ ಮಟ್ಟದ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ 250 ವಿದ್ಯಾರ್ಥಿಗಳು ಕಲೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೂನಿಯರ್, ಸೀನಿಯರ್, ಸಬ್ ಜೂನಿಯರ್, ಜನರಲ್ ವಿಭಾಗದಲ್ಲಿ ಒಟ್ಟು 28 ವಿವಿಧ ಸ್ಪರ್ಧೆಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.